ಬೀದರ್: ಜಿಲ್ಲೆಯಲ್ಲಿ 8 ಜನrಇಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 618ಕ್ಕೆ ಏರಿಕೆಯಾಗಿದೆ. ಅಲ್ಲದೆ ಸೋಂಕಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ.
ಬೀದರ್ನಲ್ಲಿ ಇಂದು 8 ಮಂದಿಗೆ ಕೊರೊನಾ: ಮತ್ತಿಬ್ಬರು ಬಲಿ - ಬೀದರ್ ಜಿಲ್ಲೆ
ಬೀದರ್ ಜಿಲ್ಲೆಯಲ್ಲಿ ಇಂದು 8 ಜನರಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 618ಕ್ಕೆ ಏರಿಕೆಯಾಗಿದೆ.
ಕೊರೊನಾಗೆ ಬಲಿಯಾದವರ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, 63 ವಯಸ್ಸಿನ ನಿವೃತ್ತ ಪಿಎಸ್ಐ ಮೃತಪಟ್ಟಿದ್ದಾರೆ. ಇವರು ತೀವ್ರ ಉಸಿರಾಟದ ತೊಂದರೆ, ಜ್ವರ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದರು. ಇವರ ಕೊರೊನಾ ವರದಿ ಪಾಸಿಟಿವ್ ಬಂದಿದೆ. ಅಲ್ಲದೆ ತಾಲೂಕಿನ ಯದಲಾಪುರ್ ಗ್ರಾಮದ 80 ವರ್ಷದ ಮಹಿಳೆ ಶೀತ, ಜ್ವರ, ಉಸಿರಾಟದ ತೊಂದರೆಯಿಂದ ಬಳಲಿ ಇಂದು ಸಾವನ್ನಪ್ಪಿದ್ದು, ಇವರಲ್ಲೂ ಕೊರೊನಾ ಸೋಂಕು ಪತ್ತೆಯಾಗಿದೆ.
ಇಂದು ನಗರದಲ್ಲಿ ಬೀದರ್-2, ಅಮಲಾಪುರ್-1, ಭಾಲ್ಕಿ ತಾಲೂಕಿನ ಇಂಚೂರು -1, ಚಿಟಗುಪ್ಪ-1, ಮುತ್ತಂಗಿ-1 ಸೋಂಕು ಪತ್ತೆಯಾಗಿದೆ. 500 ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ.