ಕರ್ನಾಟಕ

karnataka

ETV Bharat / state

ಚುನಾವಣಾ ಕರ್ತವ್ಯದಲ್ಲಿದ್ದ ಚಾಲಕ ಶವವಾಗಿ ಪತ್ತೆ: ಈಶಾನ್ಯ ಸಾರಿಗೆ ಸಂಸ್ಥೆ ಬಸ್​ ನಾಪತ್ತೆ! - ಬೀದರ್​ನಲ್ಲಿ ಈಶಾನ್ಯ ಸಾರಿಗೆ ಸಂಸ್ಥೆ ಬಸ್​ ನಾಪತ್ತೆ

ಬೀದರ್​ ಡಿಪೋದಲ್ಲಿ ಬಸ್​ ಚಾಲಕ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ ಚಲಾಯಿಸುತ್ತಿದ್ದ ಬಸ್​ ನಾಪತ್ತೆಯಾಗಿದೆ ಎನ್ನಲಾಗಿದೆ.

Bus Driver suicide at Bidar  Bus Driver suicide at Bidar
ಬೀದರ್​ನಲ್ಲಿ ಬಸ್​ ಚಾಲಕ ಆತ್ಮಹತ್ಯೆ

By

Published : Dec 28, 2020, 3:19 PM IST

ಬೀದರ್:ಎರಡನೇ ಹಂತದ ಗ್ರಾಮ ಪಂಚಾಯತ್​ ಚುನಾವಣೆ ಕರ್ತವ್ಯದಲ್ಲಿದ್ದ ಈಶಾನ್ಯ ಸಾರಿಗೆ ಸಂಸ್ಥೆ ಬೀದರ್ ಡಿಪೋ ಬಸ್ ಚಾಲಕನ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಸ್ ನಾಪತ್ತೆಯಾಗಿದೆ ಎಂದು ಹೇಳಲಾಗ್ತಿದೆ.

ನಗರದ ಬಸ್ ಡಿಪೋದಲ್ಲಿ ಚಾಲಕ ಓಂಕಾರನ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಭಾಲ್ಕಿ ತಾಲೂಕಿನ ಡೊಂಗರಗಿ ಗ್ರಾಮದ ಓಂಕಾರ ಕಳೆದ 8 ವರ್ಷಗಳಿಂದ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ಬಸ್​ ಚಾಲಕನ ಕುಟುಂಸ್ಥರ ಆಕ್ರಂದನ

ಓದಿ : ಪುರಸಭೆ ಅಧ್ಯಕ್ಷರ ಎದುರೇ ಜೆಇ ಮೇಲೆ ಹಲ್ಲೆಗೆ ಯತ್ನ: ದೂರು ದಾಖಲು

ಓಂಕಾರ ಚಲಾಯಿಸುತ್ತಿದ್ದ ಕೆಎ-32 ಎಫ್​- 926 ಬಸ್ಅ​ನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಸದ್ಯ ಬಸ್​ ನಾಪತ್ತೆಯಾಗಿದೆ ಎನ್ನಲಾಗ್ತಿದೆ.

ABOUT THE AUTHOR

...view details