ಬೀದರ್: ಬ್ರೀಮ್ಸ್ ಆಸ್ಪತ್ರೆ ದುರಾವಸ್ಥೆ ಕುರಿತು ಸಚಿವರು, ಶಾಸಕರು ಹಾಗೂ ಸಂಸದರು ಸಾಲು ಸಾಲು ಭೇಟಿ ನೀಡಿ ವೈದ್ಯರನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ್ರು ಸಹ ಎನು ಪ್ರಯೋಜವಾಗದೇ ಇರುವುದು ದುರಂತವೇ ಸರಿ.
ಬ್ರೀಮ್ಸ್ ಆಸ್ಪತ್ರೆಯ ದುರಾಡಳಿತ ಕುರಿತು ವ್ಯಾಪಕ ಆಕ್ರೋಶ ನಗರದ ಕೊಳಾರ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ ಮೈ ಸುಟ್ಟುಕೊಂಡು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದ ದೇವರಾಜ್ ಎಂಬಾತನಿಗೆ ಆರೋಗ್ಯ ಸೇವೆ ನೀಡಲು ಬ್ರೀಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ಬ್ರೀಮ್ಸ್ ದುರಾಡಳಿತದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ.
ಒಂದು ವರ್ಷದ ಹಿಂದೆಯಷ್ಟೇ ಲೋಕಾರ್ಪಣೆಗೊಂದ ಬ್ರೀಮ್ಸ್ ಆಸ್ಪತ್ರೆಯಲ್ಲಿ ಮೇಲ್ಛಾವಣಿ ದುರಂತ, ರೋಗಿಗಳಿಗೆ ಚಿಕಿತ್ಸೆ ನೀಡಲು ನಿರ್ಲಕ್ಷ್ಯ, ಸ್ಟಚ್ಚರ್ ಇಲ್ಲದೆ ರೋಗಿಗಳ ಪರದಾಟ ಎಲ್ಲದನ್ನು ಗಮನಿಸಿದ ಸಂಸದ ಭಗವಂತ ಖೂಬಾ ವೈದ್ಯರ ಮೇಲೆ ಫುಲ್ ಗರಂ ಆಗಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ರು. ಅಷ್ಟೇ ಅಲ್ಲದೆ ವೈದ್ಯಕೀಯ ವಿಜ್ಞಾನಗಳ ಸಚಿವ ತುಕಾರಾಂ, ಶಿವಾನಂದ ಪಾಟೀಲ್, ಬಂಡೆಪ್ಪ ಕಾಶೆಂಪೂರ್ ಹಾಗೂ ರಹಿಂಖಾನ್ ಅವರು ಆಸ್ಪತ್ರೆ ದುರಾವಸ್ಥೆ, ಆರೋಗ್ಯ ಸೇವೆಯಲ್ಲಾಗುತ್ತಿರುವ ಬೇಜವಾಬ್ದಾರಿತನದ ವಿರುದ್ದ ವೈದ್ಯರಿಗೆ ಕ್ಲಾಸ್ ತೆಗೆದುಕೊಂಡಿದ್ದರು.
ಅಷ್ಟೇ ಅಲ್ಲದೆ ಮೊನ್ನೆತಾನೆ ಗ್ರಾಮ ವಾಸ್ತವ್ಯಕ್ಕೆ ಬಂದ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ವೇದಿಕೆಯಲ್ಲೇ ಬ್ರೀಮ್ಸ್ ದುರಾವಸ್ಥೆ ಸರಿ ಪಡಿಸಲು ಇನ್ನೂರು ಕೋಟಿ ರೂ. ಬಿಡುಗಡೆ ಮಾಡಿ ಜನರಿಗೆ ಉತ್ತಮ ಆರೋಗ್ಯ ಸೇವೆ ಕೊಡುವುದಾಗಿ ಭರವಸೆ ನೀಡಿದ್ದರು. ಸಿಎಂ ಭರವಸೆ ಕೊಟ್ಟು ಹೊದ ಎರಡೇ ದಿನದಲ್ಲಿ ಬ್ರೀಮ್ಸ್ ಸಿಬ್ಬಂದಿ ಮತ್ತೊಂದು ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯ ತೋರುವ ಮೂಲಕ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.