ಲಾಕ್ಡೌನ್ ಆದೇಶ ಉಲ್ಲಂಘಿಸಿ ಬೈಕ್ ರೈಡ್ ಮಾಡುತ್ತಿದ್ದವರ ಮೈಚಳಿ ಬಿಡಿಸಿದ ಪಿಎಸ್ಐ - Aurad PSI Jagdish Nayak
ಔರಾದ್ ಪಿಎಸ್ಐ ಜಗದೀಶ್ ನಾಯಕ್ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಕಟ್ಟಿಕೊಂಡು ನಿಷೇಧಾಜ್ಞೆ ಉಲ್ಲಂಘನೆ ಮಾಡ್ತಿದ್ದ 10ಕ್ಕೂ ಅಧಿಕ ಜನರಿಗೆ ಬಸ್ಕಿ ಹೊಡೆಸಿ ಇನ್ನೊಮ್ಮೆ ಬೀದಿಗೆ ಬಂದ್ರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಬೀದರ್: ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಲಾಕ್ಡೌನ್ ಆದೇಶ ನೀಡಲಾಗಿದ್ದು, ನಿಯಮ ಉಲ್ಲಂಘಿಸಿ ಬೀದಿ ಬೀದಿಯಲ್ಲಿ ಬೈಕ್ ರೈಡ್ ಮಾಡ್ತಿದ್ದವರಿಗೆ ಔರಾದ್ ಪಿಎಸ್ಐ ಜಗದೀಶ್ ನಾಯಕ್ ಮೈಚಳಿ ಬಿಡಿಸಿದ್ದಾರೆ.
ಜಿಲ್ಲೆಯ ಔರಾದ್ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಅಧಿಕಾರಿಗಳ ತಂಡ ಸಾಮೂಹಿಕವಾಗಿ ಎಚ್ಚರಿಕೆ ನೀಡಿದೆ. ಅನಗತ್ಯವಾಗಿ ಮನೆಯಿಂದ ಹೊರ ಬಂದು ಬೈಕ್ಗಳ ಮೇಲೆ ರೈಡ್ ಮಾಡಿದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಕಟ್ಟಿಕೊಂಡು ನಿಷೇಧಾಜ್ಞೆ ಉಲ್ಲಂಘನೆ ಮಾಡ್ತಿದ್ದ 10ಕ್ಕೂ ಅಧಿಕ ಜನರಿಗೆ ಬಸ್ಕಿ ಹೊಡೆಸಿ ಇನ್ನೊಮ್ಮೆ ಬೀದಿಗೆ ಬಂದ್ರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿ ಕಳಿಸಿದ್ದಾರೆ.
ಪಿಎಸ್ಐ ಜಗದೀಶ್ ನಾಯಕ ಅವರ ಈ ಕಾರ್ಯ ಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಮನೆಯಲ್ಲೇ ಇದ್ದು ಲಾಕ್ಡೌನ್ಗೆ ಸ್ಪಂದಿಸುತ್ತಿರುವ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.