ಬೀದರ್ :ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಕೆರೆಕಟ್ಟೆಗಳು ತುಂಬಿವೆ. ಈ ವೇಳೆ ಊರ ಹೊರಗಿನ ಕೆರೆಯ ಪಕ್ಕದಲ್ಲಿ ಆಟವಾಡಲು ಹೋದ ಇಬ್ಬರು ಮಕ್ಕಳು ನೀರುಪಾಲಾದ ಹೃದಯ ವಿದ್ರಾವಕ ಘಟನೆ ನಡೆದಿದೆ.
ನಿಜಾಂಪೂರ್ ಗ್ರಾಮದ ಕೆರೆಯ ಬಳಿ ಸೈಕಲ್ ಟೈರ್ನಲ್ಲಿ ಆಟವಾಡಲು ಹೋಗಿದ್ದ ಅಕ್ಕ-ತಮ್ಮ ಇಬ್ಬರು ನೀರುಪಾಲಾಗಿದ್ದಾರೆ. ಅರಸು ಫಕ್ರು(6) ಹಾಗೂ ಅನು ಫಕ್ರು(8) ಮೃತ ಮಕ್ಕಳು. ಜಿಲ್ಲೆಯಾದ್ಯಂತ ಸುರಿದ ಧಾರಾಕಾರ ಮಳೆಯಿಂದಾಗ ಕೆರೆ ಕಟ್ಟೆಗಳೆಲ್ಲವೂ ತುಂಬಿವೆ.