ಕರ್ನಾಟಕ

karnataka

ಮಾಣಿಕ ಪ್ರಭು ನದಿಯಲ್ಲಿ ಕಾರ್ಖಾನೆಗಳ ತ್ಯಾಜ್ಯ: ಸ್ಥಳೀಯರ ಆಕ್ರೋಶ

By

Published : Feb 17, 2022, 3:29 PM IST

ಬೀದರ್​ ಜಿಲ್ಲೆಯ ಹುಮನಾಬಾದ್ ಕೈಗಾರಿಕಾ ವಲಯದಲ್ಲಿರುವ ಕಾರ್ಖಾನೆಗಳು ರಾಸಾಯನಿಕ ತ್ಯಾಜ್ಯವನ್ನು ಮಾಣಿಕ ಪ್ರಭು ನದಿಗೆ ಬಿಡುತ್ತಿವೆ. ಇದರಿಂದ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bidar Malikaprabhu River is full of chemicals from industries
ಕಾರ್ಖಾನೆಗಳ ತ್ಯಾಜ್ಯದಿಂದ ತುಂಬಿದ ಬೀದರ್​ ಮಾಣಿಕ ಪ್ರಭು ನದಿ

ಬೀದರ್: ಜಿಲ್ಲೆಯ ಹುಮನಾಬಾದ್ ಪಟ್ಟಣದ ಐತಿಹಾಸಿಕ ಮಾಣಿಕ ಪ್ರಭು ದೇವಸ್ಥಾನದ ಪಕ್ಕದಲ್ಲಿರುವ ನದಿ ಕಾರ್ಖಾನೆಗಳಿಂದ ಬರುವ ತ್ಯಾಜ್ಯದಿಂದ ಮಾಲಿನ್ಯಗೊಂಡಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಖಾನೆಗಳ ತ್ಯಾಜ್ಯದಿಂದ ತುಂಬಿದ ಬೀದರ್​ ಮಾಣಿಕ ಪ್ರಭು ನದಿ

ಬೀದರ್​​​ - ಕಲಬುರಗಿ ಹೆದ್ದಾರಿ ಪಕ್ಕದಲ್ಲಿರುವ ಹುಮನಾಬಾದ್ ಕೈಗಾರಿಕಾ ವಲಯದಲ್ಲಿರುವ ಕಾರ್ಖಾನೆಗಳು ರಾಸಾಯನಿಕ ತ್ಯಾಜ್ಯವನ್ನು ನದಿಗೆ ಬಿಡುತ್ತಿವೆ. ಇದರಿಂದ ಗಡವಂತಿ ಹಾಗೂ ಮಾಣಿಕ ಗ್ರಾಮದ ಅಂತರ್ಜಲ ಮಟ್ಟದಲ್ಲಿ ಕೆಮಿಕಲ್ ಸೇರಿಕೊಂಡು ಸಾಕಷ್ಟು ಸಮಸ್ಯೆ ಉಂಟಾಗಿದೆ. ವಿಷಪೂರಿತ ತ್ಯಾಜ್ಯ ಕುಡಿಯುವ ನೀರಿಗೆ ಸೇರುವ ಮೂಲಕ ಸ್ಥಳೀಯ ಜನರಲ್ಲಿ ಚರ್ಮ ರೋಗ, ಅಂಗಾಂಗ ವಿಕಲತೆ ಸೇರಿದಂತೆ ಹಲವು ರೋಗ ಬಾಧೆಗಳು ಕಾಣಿಸಿಕೊಳ್ಳುತ್ತಿವೆ.

ಕೇಲವ ಸ್ಥಳೀಯರು ಮಾತ್ರವಲ್ಲದೆ ರೈತರು ಕೂಡ ಸಮಸ್ಯೆ ಎದುರಿಸುತ್ತಿದ್ದು, ವಿಷಪೂರಿತ ರಾಸಾಯನಿಕ ಜಮೀನುಗಳಿಗೆ ಸೇರಿ ಬಂಜರು ಭೂಮಿಗಳಾಗುತ್ತಿವೆ. ಹೊಲಗಳಲ್ಲಿ ಬೆಳೆ ಬೆಳೆದರೂ ಸರಿಯಾದ ಇಳುವರಿ ಬರದೇ ಸಮಸ್ಯೆ ಕೂಡ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಕಾರ್ಖಾನೆಗಳ ಧೋರಣೆ ಖಂಡಿಸಿ ಸ್ಥಳೀಯರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದಾದ ಕೆಲಕಾಲದವರೆಗೆ ಕಾರ್ಖಾನೆಯವರು ನದಿಗೆ ತ್ಯಾಜ್ಯ ಬಿಟ್ಟಿರಲಿಲ್ಲ. ಈಗ ಮತ್ತೆ ಅದೇ ವರಸೆ ಆರಂಭಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಪರಿಷತ್​ನಲ್ಲಿ ಮುಂದುವರೆದ ಕಾಂಗ್ರೆಸ್ ಧರಣಿ: ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ

ABOUT THE AUTHOR

...view details