ಬೀದರ್:ಜಿಲ್ಲೆಯಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು 5 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 502ಕ್ಕೆ ಏರಿಕೆಯಾಗಿದೆ.
ಬೀದರ್ನಲ್ಲಿ ಇಂದು ಐವರಿಗೆ ಕೊರೊನಾ - ಕೊರೊನಾ ಸುದ್ದಿ
ಬೀದರ್ ಜಿಲ್ಲೆಯಲ್ಲಿ ಇಂದು ಐದು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 502ಕ್ಕೆ ಏರಿಕೆಯಾಗಿದೆ.
ಐದು ಕೊರೊನಾ ಪಾಸಿಟಿವ್ ಪ್ರಕರಣ
ಜಿಲ್ಲೆಯ ಚಿಟಗುಪ್ಪ-01, ಭಾಲ್ಕಿ ತಾಲೂಕಿನ ಮಳಚಾಪುರ್-1, ಔರಾದ್ ಪಟ್ಟಣದ ಲಿಡ್ಕರ್ ಕಾಲೋನಿ-01, ಕಮಲನಗರ-01 ಹಾಗೂ ಹುಮನಾಬಾದ್ ತಾಲೂಕಿನ ಡಾಕುಳಗಿ-01 ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ.
ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 502ಕ್ಕೆ ಏರಿಕೆಯಾಗಿದ್ದು, 324 ಜನರು ಗುಣಮುಖರಾಗಿದ್ದಾರೆ. 166 ಜನರು ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 15 ಜನರು ಸಾವಿಗೀಡಾಗಿದ್ದಾರೆ.