ಬೀದರ್: ಜಿಲ್ಲೆಯಲ್ಲಿ ಇಂದು 48 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಸಾವನಪ್ಪಿದ್ದಾರೆ. ಸೋಂಕಿತರ ಸಂಖ್ಯೆ ಇದೀಗ 2,071ಕ್ಕೆ ಏರಿಕೆಯಾಗಿದೆ.
ಬೀದರ್: 48 ಪಾಸಿಟಿವ್, ಎರಡು ಸಾವಿರ ಗಡಿ ದಾಟಿದ ಕೊರೊನಾ ಪ್ರಕರಣಗಳು! - ಬೀದರ್ ಜಿಲ್ಲಾ ಸುದ್ದಿ
ಬೀದರ್ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಂದು ಒಂದೇ ದಿನ 48 ಮಂದಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೆ ಇಬ್ಬರು ಬಲಿಯಾಗಿದ್ದಾರೆ.
ಬೀದರ್ ಕೊರೊನಾ ಪ್ರಕರಣಗಳು
ಜಿಲ್ಲೆಯ ಔರಾದ್-08, ಬಸವಕಲ್ಯಾಣ-03, ಭಾಲ್ಕಿ-07, ಬೀದರ್-23, ಹುಮನಾಬಾದ್-07 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2071 ಕ್ಕೆ ಏರಿಕೆಯಾಗಿದ್ದು, 1409 ಜನರು ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 74 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.