ಬೀದರ್: ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಬೀದರ್ ನಾಗರೀಕ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಫೆಬ್ರುವರಿ 7ರಂದು ಮುಹೂರ್ತ ನಿಗದಿ ಆಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದ ಭಗವಂತ ಖೂಬಾ ಅವರ ತಡಂ ಕೊನೆ ಹಂತದ ಸಿದ್ಧತೆ ಪರಿಶೀಲನೆ ನಡೆಸಿದ್ರು.
ಬೀದರ್ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್... ಕೊನೆ ಕ್ಷಣದ ತಯಾರಿ ವೀಕ್ಷಿಸಿದ ಸಚಿವರ ಟೀಂ - ಬೀದರ್ ಸುದ್ದಿ
ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ಬೀದರ್ ನಾಗರೀಕ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಸಜ್ಜಾಗಿದ್ದು, ಫೆಬ್ರುವರಿ 7ರಂದು ಮುಹೂರ್ತ ಫಿಕ್ಸ್ ಆಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಸಂಸದ ಭಗವಂತ ಖೂಬಾ ಅವರ ತಂಡ ಕೊನೆ ಹಂತದ ಸಿದ್ಧತೆ ಪರಿಶೀಲನೆ ನಡೆಸಿದ್ರು.
ನಗರದ ಚಿದ್ರಿ ಹೊರವಲಯದಲ್ಲಿ ನಿರ್ಮಾಣವಾಗಿರುವ ಟರ್ಮಿನಲ್ ಕಾಮಗಾರಿಯ ಅಂತಿಮ ಹಂತದ ಕೆಲಸವನ್ನು ವೀಕ್ಷಿಸಿದ ಸಚಿವ ಪ್ರಭು ಚವ್ಹಾಣ್, ವಿಮಾನಯಾನ ಆರಂಭಕ್ಕೆ ಎರಡೇ ದಿನ ಬಾಕಿಯಿದೆ. ಬಾಕಿ ಉಳಿದಿರುವ ಸಣ್ಣಪುಟ್ಟ ಕೆಲಸವನ್ನ ಹಗಲು-ರಾತ್ರಿ ಎನ್ನದೆ ಮಾಡಿ ಮುಗಿಸುವಂತೆ ಗುತ್ತಿಗೆದಾರ ಗುರುನಾಥ್ ಕೊಳ್ಳೂರ್ ಅವರಿಗೆ ಸೂಚಿಸಿದ್ರು.
ಫೆ. 7ರಂದು ಸಿ ಎಂ ಬಿ.ಎಸ್. ಯಡಿಯೂರಪ್ಪ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡುತ್ತಿದ್ದು, ಪೆಂಡಾಲ್, ಪೂಜೆ ಮಾಡಲು ಸ್ಥಳ, ಪಾರ್ಕಿಂಗ್ ಹಾಗೂ ಕೇಂದ್ರ ಹಾಗೂ ರಾಜ್ಯ ನಾಯಕರ ಸ್ವಾಗತಕ್ಕಾಗಿ ಸಕಲ ಸಿದ್ಧತೆಗಳನ್ನ ಪೂರ್ಣಗೊಳಿಸುವಂತೆ ಹೇಳಿದ್ರು. ಈ ವೇಳೆ ಸಂಸದ ಭಗವಂತ ಖೂಬಾ, ಜಿಲ್ಲಾಧಿಕಾರಿ ಡಾ.ಹೆಚ್.ಆರ್ ಮಹದೇವ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ್ ಕಟ್ಟೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.