ಬಸವಕಲ್ಯಾಣ (ಬೀದರ್) :ತ್ರಿಪುರಾಂತ ಗವಿಮಠದ ಪೀಠಾಧ್ಯಕ್ಷ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಜನ್ಮ ದಿನ ಹಾಗೂ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ನಿಮಿತ್ತ ನಗರದಲ್ಲಿ ಅಭಿನವ ಘನಲಿಂಗ ಜೋಳಿಗೆ ಪಾದಯತ್ರೆ ಜರುಗಿತು.
ತ್ರಿಪುರಾಂತ ಶ್ರೀಗಳಿಂದ ಜೋಳಿಗೆ ಪಾದಯಾತ್ರೆ: ಶ್ರೀ ಈ ಅಭಿಯಾನ ಮಾಡಿದ್ದೇಕೆ? - basavakalyana news
ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಜೋಳಿಗೆ ಹಿಡಿದು ಬನ್ನಿ ನಿಮ್ಮ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ, ಆರೋಗ್ಯ ಕಾಪಾಡಿಕೊಂಡು ಆರೋಗ್ಯವಂತರಾಗಿ ಆರೋಗ್ಯಪೂರ್ಣ ಸಮಾಜ ಕಟ್ಟೋಣ ಎಂದು ಕರೆ ನೀಡಿದರು. ಹಲವರು ಗುಟಕಾ ಪಾಕೇಟ್, ತಂಬಾಕು, ಬೀಡಿ, ಸಿಗರೇಟ್‌ಗಳನ್ನು ಜೋಳಿಗೆಗೆ ಹಾಕಿ ಈ ಚಟದಿಂದ ಮುಕ್ತರಾಗಲು ಸಂಕಲ್ಪ ಮಾಡಿದರು.
ನಗರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ ನಂತರ ನಗರದ ಮುಖ್ಯ ರಸ್ತೆಗಳಲ್ಲಿ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಜೋಳಿಗೆ ಹಿಡಿದು, ಬನ್ನಿ ನಿಮ್ಮ ದುಶ್ಚಟಗಳನ್ನು ನನ್ನ ಜೋಳಿಗೆಗೆ ಹಾಕಿ, ಆರೋಗ್ಯ ಕಾಪಾಡಿಕೊಂಡು ಆರೋಗ್ಯವಂತರಾಗಿ, ಆರೋಗ್ಯಪೂರ್ಣ ಸಮಾಜ ಕಟ್ಟೋಣ ಎಂದು ಕರೆ ನೀಡಿದರು. ಹಲವರು ಗುಟಕಾ ಪಾಕೇಟ್, ತಂಬಾಕು, ಬೀಡಿ, ಸಿಗರೇಟ್‌ಗಳನ್ನು ಜೋಳಿಗೆಗೆ ಹಾಕಿ ಈ ಚಟದಿಂದ ಮುಕ್ತರಾಗಲು ಸಂಕಲ್ಪ ಮಾಡಿದರು.
ಪಾದಯಾತ್ರೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಸದೃಢ ಆರೋಗ್ಯದಿಂದ ಮಾತ್ರ ಸದೃಢ ಸಮಾಜ ನಿರ್ಮಿಸಿಲು ಸಾಧ್ಯ. ಯುವಕರಲ್ಲಿ ದುಶ್ಚಟಗಳ ವಿರುದ್ಧ ಒಂದಿಷ್ಟು ಅರಿವು ಮೂಡಿಸಬೇಕು ಎನ್ನುವುದು ನಮ್ಮ ಸಂಕಲ್ಪ. ಸಮಾಜದಲ್ಲಿ ಅನೇಕ ಯುವಕರು ಚಟಗಳಿಗೆ ಆಕರ್ಷಿತರಾಗುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಪಾದಯಾತ್ರೆ ನಡೆಸಿ ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಎಂದು ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವಂತೆ ಕೇಳಿಕೊಳ್ಳಲಾಗುತ್ತಿದೆ ಎಂದರು.