ಬೀದರ್: ಜಿಲ್ಲೆಯಲ್ಲಿ ಕೋವಿಡ್ -19 ಸೊಂಕು ಶಂಕಿತರನ್ನು ಗುರುತಿಸಿ ಮತ್ತೆ 10 ಜನರ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ.
ಬೀದರ್ನಲ್ಲಿ ಹತ್ತು ಮಂದಿಗೆ ಕೊರೊನಾ ಶಂಕೆ: ರಕ್ತ, ಗಂಟಲಿನ ಮಾದರಿ ಪರೀಕ್ಷೆಗೆ ರವಾನೆ
ಇಂದು ಬೀದರ್ ಜಿಲ್ಲೆಯಲ್ಲಿ ಕೊರೊನಾ ಶಂಕೆ ವ್ಯಕ್ತವಾದ ಕಾರಣ ಮತ್ತೆ 10 ಜನರ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.
ಇದುವರೆಗೂ100 ಶಂಕಿತರ ಮಾದರಿ ಪರೀಕ್ಷೆ ಮಾಡಲಾಗಿದೆ. ಬುಧವಾರದ ವರದಿಯಲ್ಲಿ ಜಿಲ್ಲೆಯಲ್ಲಿ ಎಲ್ಲಾ ವರದಿಗಳು ಮುಗಿದಿದ್ದವು. 10 ಜನರಲ್ಲಿ ಸೊಂಕು ಧೃಡಪಟ್ಟಿರುವುದನ್ನು ಬಿಟ್ಟರೆ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿರಲಿಲ್ಲ. ಇಂದು ಮುಂಜಾಗೃತಾ ಕ್ರಮವಾಗಿ ಮತ್ತೆ 10 ಜನರ ರಕ್ತ ಹಾಗೂ ಕಫದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಲು ಸಾಲು ಸಭೆಗಳನ್ನು ಮಾಡುವ ಮೂಲಕ ಜಿಲ್ಲಾಡಳಿತ ಲಾಕ್ ಡೌನ್ ಬಿಗಿಗೊಳಿಸಿದೆ. ಚೆಕ್ಪೋಸ್ಟ್, ಸೇರಿದಂತೆ ಹೊಂ ಕ್ವಾರಂಟೈನ್ ನಲ್ಲಿ ಇರಲಾದ ಜನರ ಮೇಲೂ ತೀವ್ರ ನಿಗಾ ವಹಸಿರುವ ಆರೋಗ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಶಂಕೆ ವ್ಯಕ್ತವಾದವರನ್ನು ತಕ್ಷಣ ತಪಾಸಣೆಗೆ ಒಳಪಡಿಸುತ್ತಿದ್ದಾರೆ.