ಬಸವಕಲ್ಯಾಣ (ಬೀದರ್): ಶ್ರೀ ಭಾಗ್ಯವಂತಿ ದೇವಿ ಮೂರ್ತಿ ಮೇಲೆ ನಾಗರ ಹಾವೊಂದು ಕಾಣಿಸಿಕೊಂಡು ಆಶ್ಚರ್ಯ ಮೂಡಿಸಿದ ಪ್ರಸಂಗ ಬಸವಕಲ್ಯಾಣ ತಾಲೂಕಿನ ಕೋಹಿನೂರವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಭಾಗ್ಯವಂತಿ ದೇವಿ ಮೂರ್ತಿ ಮೇಲೆ ಕಾಣಿಸಿಕೊಂಡ ನಾಗರ ಹಾವು ನಿನ್ನೆ ಮಧ್ಯಾಹ್ನ 12ರ ಸುಮಾರಿಗೆ ಮೂರ್ತಿ ಸಮೀಪದ ಹವಾ ಮಲ್ಲಿನಾಥ ಆಶ್ರಮದಲ್ಲಿ ಹಾವು ಕಾಣಿಸಿಕೊಂಡಿದ್ದು, ಇಲ್ಲಿ ಜನ ಸೇರುತ್ತಿರುವುದನ್ನು ಗಮನಸಿದ ಹಾವು, ಆಶ್ರಮದ ಸಮಿಪವೇ ಪ್ರತಿಷ್ಠಾಪಿಸಲಾದ ಭಾಗ್ಯವಂತಿ ದೇವಿ ಮೂರ್ತಿ ಬಳಿ ತೆರಳಿ ಸಂಜೆವರೆಗೆ ಅಲ್ಲೇ ಠಿಕಾಣಿ ಹೂಡಿತ್ತು.
ಸುದ್ದಿ ತಿಳಿದ ಗ್ರಾಮದ ಜನರು ದಸರಾ ಹಬ್ಬದ ಸಂದರ್ಭದಲ್ಲಿ ಗ್ರಾಮಕ್ಕೆ ಹಾವಿನ ರೂಪದಲ್ಲಿ ಭಾಗ್ಯವಂತಿ ದೇವಿ ಬಂದಿದ್ದಾಳೆ ಎಂದು ಕರ್ಪೂರ ಆರತಿ ಬೆಳಗಿ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಗ್ರಾಮಸ್ಥರು ಮಲ್ಲಿನಾಥ ಶ್ರೀಗಳನ್ನು ಕರೆ ಮಾಡಿ ಸಂಪರ್ಕಿಸಿದ್ದು, ಹಾವಿಗೆ ಹಾನಿ ಮಾಡಬೇಡಿ ಎಂದು ಶ್ರೀಗಳು ಗ್ರಾಮಸ್ಥರಿಗೆ ಸಲಹೆ ನೀಡಿದ್ದಾರೆ.
ಈ ನಡುವೆ ಯುವಕರು ಹಾವಿನ ಸಮೀಪ ನಿಂತು ಸೆಲ್ಫಿ ತೆಗೆದುಕೊಂಡಿದ್ದಾರೆ. ಇದೇನು ಪವಾಡನೋ, ಸಹಜನೋ ಗೊತ್ತಿಲ್ಲ. ಸಂಜೆಯಾದರು ಹಾವು ಮಾತ್ರ ಸ್ಥಳಬಿಟ್ಟು ಕದಲುತ್ತಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.