ಕರ್ನಾಟಕ

karnataka

ETV Bharat / state

ಬೀದರ್​ನಲ್ಲಿ ಕೊರೊನಾಗೆ ಇಂದು ನಾಲ್ಕು ಬಲಿ

ಇಂದು ಜಿಲ್ಲೆಯಲ್ಲಿ 25 ಹೊಸ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯ ಒಟ್ಟು ಕೊರೊನಾ ಪ್ರಕರಣ 1,403ಕ್ಕೆ ಏರಿಕೆಯಾಗಿದೆ. ಇಂದು 78 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ..

4 new death reported in Bidar
ಕೊರೊನಾ

By

Published : Jul 20, 2020, 7:16 PM IST

ಬೀದರ್:ಗಡಿ ಜಿಲ್ಲೆ ಬೀದರ್​ನಲ್ಲಿ ಕೊರೊನಾ ವೈರಸ್‌ನಿಂದಾಗಿ ಇಂದು ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.

ಕೊರೊನಾ ಸಾವು

ಬೀದರ್ ತಾಲೂಕಿನಲ್ಲಿ ಇಬ್ಬರು, ಬಸವಕಲ್ಯಾಣ ಹಾಗೂ ಹುಮನಾಬಾದ್ ತಾಲೂಕಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದು, ಇಂದು ಒಂದೇ ದಿನ ನಾಲ್ವರು ಮೃತಪಟ್ಟಿದ್ದಾರೆ. ಮೃತರೆಲ್ಲರೂ ವಯಸ್ಕರಾಗಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಬೀದರ್​ ಕೊರೊನಾ ಅಂಕಿ-ಅಂಶ
ಇಂದಿನ ಹೊಸ ಪ್ರಕರಣ

ಇಂದು ಜಿಲ್ಲೆಯಲ್ಲಿ 25 ಹೊಸ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯ ಒಟ್ಟು ಕೊರೊನಾ ಪ್ರಕರಣ 1,403ಕ್ಕೆ ಏರಿಕೆಯಾಗಿದೆ. ಇಂದು 78 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 818 ಜನರು ಗುಣಮುಖರಾಗಿದ್ದಾರೆ. ಸಾವನ್ನಪ್ಪಿದ ಒಟ್ಟು 63 ಜನರ ಪೈಕಿ ಇಬ್ಬರು ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details