ಕರ್ನಾಟಕ

karnataka

ETV Bharat / state

ಹರಪನಹಳ್ಳಿ: ಈಜುವ ವೇಳೆ ಹೊಳೆಯಲ್ಲಿ ಮುಳುಗಿ ಯುವಕ ಸಾವು - boy drowns in a river

ಹೊಳೆಯಲ್ಲಿ ಈಜಲು ಹೋಗಿ ಯುವಕನೊಬ್ಬ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಕಡತಿ ಗ್ರಾಮದಲ್ಲಿ ನಡೆದಿದೆ.

young man drowns in a river
ಹೊಳೆಯಲ್ಲಿ ಮುಳುಗಿ ಯುವಕ ಸಾವು

By

Published : Mar 26, 2021, 2:06 PM IST

ಹೊಸಪೇಟೆ: ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕಡತಿ ಗ್ರಾಮದಲ್ಲಿಂದು ಈಜಾಡಲು ಹೋಗಿ ಹೊಳೆಯಲ್ಲಿ ಮುಳುಗಿ ಯುವಕ ಸಾವನ್ನಪ್ಪಿದ್ದಾನೆ.

ಹೊಳೆಯಲ್ಲಿ ಮುಳುಗಿ ಯುವಕ ಸಾವು
ಹರ್ನಾಳು ಗ್ರಾಮದ ಅರುಣ( 22) ಸಾವನ್ನಪ್ಪಿದ ಯುವಕ‌. ನಿನ್ನೆ ಕಡತಿ ಗ್ರಾಮದಲ್ಲಿ ಜಾತ್ರೆಗೆ ಈ ಯುವಕ ಬಂದಿದ್ದ. ಇವತ್ತು ಈಜಲು ಹೊಳೆಗೆ ತೆರಳಿದ್ದಾಗ ಮುಳುಗಿ ಮೃತಪಟ್ಟಿದ್ದಾನೆ.

ಮೃತದೇಹವನ್ನು ನೀರಿನಿಂದ ಹೊರ ತೆಗೆಯಲಾಗಿದೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹಲವಾಗಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details