ಕರ್ನಾಟಕ

karnataka

ETV Bharat / state

ವರದಕ್ಷಿಣೆ ಕಿರುಕುಳ, ಕೊಲೆ ಆರೋಪ: ಗಂಡನ ಮನೆ ಮುಂದೆಯೇ ಪತ್ನಿ ಶವಸಂಸ್ಕಾರ - ಗಂಡನ ಮನೆ ಮುಂದೆಯೇ ಹೆಂಡತಿಯ ಶವಸಂಸ್ಕಾರ

ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ, ಕೊಲೆ ಮಾಡಿದ್ದಾರೆಂಬ ಆರೋಪ ಮಾಡಿರುವ ಪತ್ನಿ ಕುಟುಂಬದವರು ಗಂಡನ ಮನೆ ಮುಂದೆಯೇ ಪತ್ನಿಯ ಅಂತ್ಯಕ್ರಿಯೆ ನಡೆಸಿದರು.

hosakote
ಗಂಡನ ಮನೆ ಮುಂದೆಯೇ ಹೆಂಡತಿಯ ಶವಸಂಸ್ಕಾರ

By

Published : Sep 16, 2020, 11:20 PM IST

ಹೊಸಕೋಟೆ: ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆಂಬ ಆರೋಪ ಮಾಡಿರುವ ಪತ್ನಿ ಕುಟುಂಬದವರು ಗಂಡನ ಮನೆ ಮುಂದೆಯೇ ಪತ್ನಿಯ ಅಂತ್ಯಕ್ರಿಯೆ ನಡೆಸಿರುವ ಘಟನೆ ಹೊಸಕೋಟೆ ತಾಲೂಕಿನ ನಡವತ್ತಿ ಗ್ರಾಮದಲ್ಲಿ ನಡೆದಿದೆ.

ಭಾವನಾ ಮೃತ ದುರ್ದೈವಿಯಾಗಿದ್ದು, ಗ್ರಾಮದ ನಿವಾಸಿ ಗಜೇಂದ್ರ ಎಂಬಾತ ಭಾವನಾರನ್ನು ಕಳೆದ ಫೆಬ್ರವರಿಯಲ್ಲಿ ವಿವಾಹವಾಗಿದ್ದನು, ಆದರೆ ಕಳೆದ ಭಾನುವಾರ ನಡವತ್ತಿ ರೈಲ್ವೆ ಹಳಿಯ ಮೇಲೆ ಭಾವನಾ ಶವ ಪತ್ತೆಯಾಗಿದೆ. ಗಂಡ ಗಜೇಂದ್ರ ಮತ್ತು ಅವನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಿ ಕೊಲೆ ಮಾಡಿರಬಹುದು ಎಂದು ಆರೋಪಿಸಿರುವ ಭಾವನಾ ಕುಟುಂಬದವರು ಆಕೆಯ ಅಂತ್ಯಕ್ರಿಯೆಯನ್ನು ಪತಿ ಗಜೇಂದ್ರನ ಮನೆ ಮುಂದೆಯೇ ಮಾಡಿದ್ದಾರೆ.

ಗಂಡನ ಮನೆ ಮುಂದೆಯೇ ಹೆಂಡತಿಯ ಶವಸಂಸ್ಕಾರ

ಗಂಡ ಗಜೇಂದ್ರ ಮತ್ತು ಅವನ ಮನೆಯವರು ಕೊಲೆ ಮಾಡಿರುವ ಆರೋಪಿಸಿ ಆಕ್ರೋಶಗೊಂಡ ಭಾವನಾ ಕುಟುಂಬಸ್ಥರು ಗಂಡ ಗಜೇಂದ್ರ ಮನೆ ಮುಂದೆ ಶವ ಸಂಸ್ಕಾರ ಮಾಡಿದ್ದಾರೆ.

ABOUT THE AUTHOR

...view details