ಕರ್ನಾಟಕ

karnataka

ETV Bharat / state

ಈಜಲು ತೆರಳಿದ್ದ ಗ್ರಾಮಲೆಕ್ಕಿಗ ನೀರಲ್ಲಿ ಸಿಲುಕಿ ಸಾವು!

ನೀರಿನಲ್ಲಿ ಈಜುವಾಗ ಕಲ್ಲುಸಂದಿಗಳಲ್ಲಿ ಕಾಲು ಸಿಕ್ಕಿ ಹಾಕಿಕೊಂಡು ಮೃತ ಪಟ್ಟಿದ್ದಾನೆಂದು ಅಂದಾಜಿಸಲಾಗಿದೆ. ಸುದ್ದಿ ತಿಳಿಯುತ್ತಲೇ ಸಿರುಗುಪ್ಪ ಪೊಲೀಸ್​ ಠಾಣೆಯ ಪಿಎಸ್ ಐ ರಂಗಯ್ಯ ಕೆ ಹಾಗೂ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಶವ ಹೊರ ತೆಗೆದಿದ್ದಾರೆ.

Bellary
Bellary

By

Published : May 12, 2021, 9:23 PM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಂಚನಗುಡ್ದದ ಬಳಿಯ ತುಂಗಭಧ್ರಾ ನದಿ ಬಳಿ ಈಜಾಡಲು ತೆರಳಿದ್ದ ಗ್ರಾಮ ಲೆಕ್ಕಿಗ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಾಲ ಬಹದ್ದೂರ್(39) ಮೂಲತಃ ಸಂಡೂರು ಗ್ರಾಮದವರು. ಮಣ್ಣೂರು ಸೂಗೂರಿನಲ್ಲಿ ಗ್ರಾಮಲೆಕ್ಕಿಗರಾಗಿ ಕಾರ್ಯನಿರ್ವಹಿಸುತ್ತಿದ್ದ, ಇವರು ಸ್ನೇಹಿತನೊಂದಿಗೆ ಬುಧವಾರ ಸಂಜೆ ತಾಲ್ಲೂಕಿನ ಕೆಂಚನಗುಡ್ಡದ ತುಂಗಭದ್ರಾ ಆಯಕಟ್ಟಿನ ಕಾಲುವೆಗಳಲ್ಲಿ ಈಜಾಡಲು ತೆರಳಿದ್ದಾರೆ. ಆದರೆ ನೀರಿನಲ್ಲಿ ಸಿಕ್ಕಿ ಮೃತಪಟ್ಟಿದ್ದಾರೆ.

ನೀರಿನಲ್ಲಿ ಈಜಾಡುವಾಗ ಕಲ್ಲುಸಂದಿಗಳಲ್ಲಿ ಕಾಲು ಸಿಕ್ಕಿ ಹಾಕಿಕೊಂಡು ಮೃತ ಪಟ್ಟಿದ್ದಾನೆ ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿಯುತ್ತಲೇ ಸಿರುಗುಪ್ಪ ಪೊಲೀಸ್​ ಠಾಣೆಯ ಪಿಎಸ್ ಐ ರಂಗಯ್ಯ ಕೆ ಹಾಗೂ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಶವವನ್ನು ಹೊರ ತೆಗೆದಿದ್ದಾರೆ.

ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details