ಕರ್ನಾಟಕ

karnataka

ETV Bharat / state

'ಜಿಂದಾಲ್' ಅಂದ್ರೆ ನನಗೂ ಭಯ, ಬಾಡಿಗೆ ಗೂಂಡಾಗಳು ಬೆದರಿಸ್ತಾರೆ: ಆನಂದ್​ ಸಿಂಗ್​

ಜಿಂದಾಲ್ ವಿರುದ್ಧ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಯಾವುದೇ ಅಪಸ್ವರ ಎತ್ತಂಗಿಲ್ಲ. ನಿನ್ನದು ಯಾವೂರು?. ನಿಮ್ಮ ವ್ಯಾಪ್ತಿಯೇನು? ನೀನು ಇಲ್ಲಿಯವನು? ಎಂಬಿತ್ಯಾದಿ ಪ್ರಶ್ನೆಗಳನ್ನು ಹಾಕುವ‌ ಮುಖೇನ ಜಿಂದಾಲ್ ಸಮೂಹ ಸಂಸ್ಥೆಯ ಬಾಡಿಗೆ ಗುಂಡಾಗಳು ಬೆದರಿಕೆವೊಡ್ಡುತ್ತಿದ್ದಾರೆ.

ಶಾಸಕ ಬಿ.ಎಸ್ ಆನಂದಸಿಂಗ್ ಸುದ್ದಿಗೋಷ್ಠಿ

By

Published : Jun 17, 2019, 4:44 PM IST

ಬಳ್ಳಾರಿ :ಜಿಂದಾಲ್ ಉಕ್ಕು ಕಾರ್ಖಾನೆ ಎಂದರೆ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಸ್ ಆನಂದಸಿಂಗ್ ಅವರಿಗೆ ಭಯವಂತೆ, ಹೀಗಂತ ಸ್ವತಃ ಶಾಸಕ ಆನಂದಸಿಂಗ್ ಅವರೇ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಂದಾಲ್ ವಿರುದ್ಧ ಮಾತನಾಡಿದವರಿಗೆ ಬೆದರಿಕೆ ನೀಡುವ ಸಂಸ್ಕೃತಿಯನ್ನ ಹುಟ್ಟುಹಾಕಿದೆ. ಹೀಗಾಗಿ, ಜಿಂದಾಲ್ ಸಮೂಹ ಸಂಸ್ಥೆ ಎಂದರೆ ನಮಗೂ ಕೂಡ ಭಯವಿದೆ ಎಂದು ತಮ್ಮ ಅಸಹಾಯಕತೆಯನ್ನ ಒಪ್ಪಿಕೊಂಡಿದ್ದಾರೆ.

ಜಿಂದಾಲ್ ವಿರುದ್ಧ ಸುತ್ತಲಿನ ಗ್ರಾಮಗಳ ಗ್ರಾಮಸ್ಥರು ಯಾವುದೇ ಅಪಸ್ವರ ಎತ್ತಂಗಿಲ್ಲ. ನಿನ್ನದು ಯಾವೂರು?. ನಿಮ್ಮ ವ್ಯಾಪ್ತಿಯೇನು? ನೀನು ಇಲ್ಲಿಯವನಾ? ಎಂಬಿತ್ಯಾದಿ ಪ್ರಶ್ನೆಗಳನ್ನು ಹಾಕುವ‌ ಮುಖೇನ ಜಿಂದಾಲ್ ಸಮೂಹ ಸಂಸ್ಥೆಯ ಬಾಡಿಗೆ ಗುಂಡಾಗಳು ಬೆದರಿಕೆವೊಡ್ಡುತ್ತಿದ್ದಾರೆ. ಅಲ್ಲದೇ, ನಿವೃತ್ತಿಯಾದ ಅರಣ್ಯ ಇಲಾಖೆಯ ನೌಕರರು ಸೇರಿದಂತೆ ಪೊಲೀಸ್ ಇಲಾಖೆ ಕೂಡ ಜಿಂದಾಲ್ ಸಮೂಹ ಸಂಸ್ಥೆಯ ಪರವಾಗಿದೆ. ಈಗಾಗಿ ಜಿಂದಾಲ್ ಸುತ್ತಲಿನ ಹಳ್ಳಿಗಳಲ್ಲಿ ವಾಸಿಸುತ್ತಿರುವ ನಿವಾಸಿಗಳು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆಂದು ಎಂದು ದೂರಿದರು.

ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಜಿಂದಾಲ್ ಗೆ ಅಂದಾಜು 3, 666 ಎಕರೆ ಭೂಮಿಯನ್ನು ಪರಭಾರೆ ಮಾಡುತ್ತಿರುವುದು ತರವಲ್ಲ. ಭೂಮಿ ಮಾರಾಟ ಮಾಡೋದರಿಂದ ರಿಯಲ್ ಎಸ್ಟೇಟ್ ಆಗಿ ಮಾರ್ಪಡಾಗುತ್ತದೆ. ಹೀಗಾಗಿ, ಗುತ್ತಿಗೆ ಆಧಾರವಾಗಿ ಭೂಮಿಯನ್ನು ರಾಜ್ಯ ಸರ್ಕಾರ ನೀಡಬೇಕು. ಯಾವುದೇ ಕಾರಣಕ್ಕೂ ಭೂಮಿಯನ್ನು‌ ಮಾರಾಟ ಮಾಡಬಾರದೆಂದರು.

ಶಾಸಕ ಬಿ.ಎಸ್ ಆನಂದಸಿಂಗ್ ಸುದ್ದಿಗೋಷ್ಠಿ

ಸಚಿವ ಸಂಪುಟದ ಉಪಸಮಿತಿ ಬಳ್ಳಾರಿಗೆ ಬರಲಿ

ಸಚಿವ ಸಂಪುಟದ ಉಪಸಮಿತಿಯ ಸದಸ್ಯರೆಲ್ಲರೂ ಕೂಡ ಈ ಜಿಲ್ಲೆಗೆ ಬರಲಿ. ಜಿಂದಾಲ್ ಉಕ್ಕು ಕಾರ್ಖಾನೆಯಿಂದಾದ ಪ್ರಯೋಜನೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿ, ಉದ್ಯೋಗ ಸೃಷ್ಠಿ ಏನಾಗಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿ, ಈ ಬಗ್ಗೆ ಸಮಗ್ರ ವರದಿಯನ್ನು ತಯಾರಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕೆಂದರು‌. ಅಲ್ಲೇಲ್ಲೋ ಬೆಂಗಳೂರಿನಲ್ಲಿ ಕುಳಿತುಕೊಂಡೇ ಉಪಸಮಿತಿ ಸದಸ್ಯರು ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ‌ ಮಂಜೂ ರಾತಿ ಮಾಡೋ ವಿಚಾರವಾಗಿ ವರದಿ ನೀಡೋದು ಬ್ಯಾಡ. ಈ ಜಿಲ್ಲೆಗೆ ಅವರು ಬರಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details