ಬಳ್ಳಾರಿ: ಜಿಲ್ಲೆಯ ಕುಡಿತಿನಿ ಪಟ್ಟಣದ ರಾಮನಗರ ಬ್ರಿಡ್ಜ್ ಬಳಿ ಇಂದು ಸರಕು ಸಾಗಣೆ ಲಾರಿ - ಬೈಕ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಲಾರಿ - ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಇಬ್ಬರ ದುರ್ಮರಣ - bellary news
ಬಳ್ಳಾರಿ ಕಡೆಯಿಂದ ಸರಕು ಸಾಗಣೆ ಲಾರಿಯೊಂದು ಹೊರಟಿತ್ತು, ಕುಡಿತಿನಿ ಕಡೆಯಿಂದ ಬೈಕ್ನಲ್ಲಿ ಈ ಮೂವರ ಬರುತ್ತಿದ್ದರು. ಕುಡಿತಿನಿ ಪಟ್ಟಣ ಹೊರ ವಲಯದ ರಾಮನಗರ ಬ್ರಿಡ್ಜ್ ಬಳಿ ಲಾರಿ-ಬೈಕ್ ಮುಖಾಮುಖಿಯಾಗಿ ಈ ಅಪಘಾತ ಸಂಭವಿಸಿದೆ.
ಲಾರಿ - ಬೈಕ್ ನಡುವೆ ಮುಖಾಮುಖಿ ಡಿಕ್ಕಿ
ಬಳ್ಳಾರಿಯ ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯ ಆಶ್ತು ಕಾಲೊನಿಯ ನಿವಾಸಿಗಳಾದ ಇಮ್ರಾನ್ (25) ಹಾಗೂ ಗೌಸ್ (20) ಮೃತರೆಂದು ಗುರುತಿಸಲಾಗಿದೆ. ಅಬ್ದುಲ್ (23) ಗಾಯಗೊಂಡ ವ್ಯಕ್ತಿಯೆಂದು ಗುರುತಿಸಲಾಗಿದೆ.
ಬಳ್ಳಾರಿ ಕಡೆಯಿಂದ ಸರಕು ಸಾಗಣೆ ಲಾರಿ ಹೊರಟಿತ್ತು. ಕುಡಿತಿನಿ ಕಡೆಯಿಂದ ಬೈಕ್ನಲ್ಲಿ ಈ ಮೂವರು ಬರುತ್ತಿದ್ದರು. ಕುಡಿತಿನಿ ಪಟ್ಟಣ ಹೊರ ವಲಯದ ರಾಮನಗರ ಬ್ರಿಡ್ಜ್ ಬಳಿ ಲಾರಿ-ಬೈಕ್ ಮುಖಾಮುಖಿಯಾಗಿ ಈ ಅಪಘಾತ ಸಂಭವಿಸಿದೆ. ಈ ಮೂವರು ರಾಡ್ ವೈಂಡಿಂಗ್ ಕಾರ್ಮಿಕರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.