ಬಳ್ಳಾರಿ: ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಮೃತಪಟ್ಟಿರುವ ಘಟನೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಉಪ್ಪಾರ ಹೊಸಹಳ್ಳಿ ಮಾರ್ಗದಲ್ಲಿ ನಡೆದಿದೆ. ತೆಕ್ಕಲಕೋಟೆ ಗ್ರಾಮದ ವೀರೇಶ್ (19), ಬಲಕುಂದಿ ಗ್ರಾಮದ ವೀರೇಶ್(23) ಮೃತರು.
ಬಳ್ಳಾರಿಯಲ್ಲಿ ಬೈಕ್ ಅಪಘಾತ - ಇಬ್ಬರು ಸವಾರರು ಸಾವು - Bellary bike accident
ಸಿರುಗುಪ್ಪ ತಾಲೂಕಿನ ಹೊಸಹಳ್ಳಿ ಮಾರ್ಗದಲ್ಲಿ ಬೈಕ್ ಅಪಘಾತ - ಇಬ್ಬರು ಸವಾರರ ಸಾವು - ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬಳ್ಳಾರಿಯಲ್ಲಿ ಬೈಕ್ ಅಪಘಾತ
ಓರ್ವ ವೀರೇಶ್ ಬಲಕುಂದಿಯಿಂದ ತೆಕ್ಕಲಕೋಟೆಗೆ, ಮತ್ತೋರ್ವ ವೀರೇಶ್ ತೆಕ್ಕಲಕೋಟೆಯಿಂದ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿದೆ. ಇಬ್ಬರ ತಲೆಗೆ ಗಂಭೀರ ಗಾಯವಾದ ಹಿನ್ನೆಲೆ ವಿಮ್ಸ್ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರೂ ಮೃತಪಟ್ಟಿದ್ದಾರೆ. ಈ ಇಬ್ಬರೂ ಹೆಲ್ಮೆಟ್ ಹಾಕಿರಲಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಆಪ್ತರ ಮಧ್ಯೆ ವೈಮನಸ್ಸು ತಂದ ಹುಡುಗಿ ವಿಚಾರ.. ಫ್ರೆಂಡ್ ಕೊಂದ ಸ್ನೇಹಿತ ಸೇರಿ ಇಬ್ಬರು ಅರೆಸ್ಟ್