ಕರ್ನಾಟಕ

karnataka

ETV Bharat / state

ನಾಳೆ ಕೂಡ್ಲಿಗಿ ಪಟ್ಟಣ ಪಂಚಾಯಿತಿ, ಕಂಪ್ಲಿ ಪುರಸಭೆ ಚುನಾವಣೆ

ನಾಳೆ ಪಟ್ಟಣ ಪಂಚಾಯಿತಿ ಹಾಗೂ ಕಂಪ್ಲಿ ಪುರಸಭೆಗೆ‌‌ ನಾಳೆ ಮತದಾನ ನಡೆಯಲಿದ್ದು, 42 ವಾರ್ಡ್​ಗಳಲ್ಲಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

Kudligi, Kampli election

By

Published : Nov 11, 2019, 8:15 PM IST

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಹಾಗೂ ಕಂಪ್ಲಿ ಪುರಸಭೆಗೆ‌‌ ನಾಳೆ ಮತದಾನ ನಡೆಯಲಿದ್ದು, 42 ವಾರ್ಡ್​ಗಳಲ್ಲಿ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಕೂಡ್ಲಿಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 20 ವಾರ್ಡ್​ಗಳಿದ್ದು, ಆ ಪೈಕಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ತಲಾ 18 ಹಾಗೂ 10 ಜನ ಪಕ್ಷೇತರರು ಸೇರಿ 64 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ನಾಳೆ ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ 5ನೇ ವಾರ್ಡಿನ ಹುಲಿಕುಂಟೆಪ್ಪ, 7ನೇ ವಾರ್ಡಿನ ಕೋರಿ ಬಸವರಾಜ, 8ನೇ ವಾರ್ಡಿನ ಎಚ್. ಪ್ರಕಾಶ್​ ಹಾಗೂ 17ನೇ ವಾರ್ಡಿನ ಡಿ.ಸುಜಾತಾ ನಾಮಪತ್ರ ವಾಪಸ್ಸು ಪಡೆದಿದ್ದಾರೆ. 18ನೇ ವಾರ್ಡಿನಿಂದ ಏಕೈಕ ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಅಭ್ಯರ್ಥಿ ವಿ.ಸರಸ್ಪತಿ ಅವರನ್ನು ಅವಿರೋಧ ಆಯ್ಕೆಗೊಳಿಸಿ ಚುನಾವಣಾಧಿಕಾರಿಗಳು ಘೋಷಣೆ ಮಾಡಿದ್ದಾರೆ.

ಕೂಡ್ಲಿಗಿ ಪಟ್ಟಣ ಪಂಚಾಯಿತಿ ವಿವರ:

* ಪುರುಷರು: 10, 263
* ಮಹಿಳೆಯರು: 10, 968
* ಇತರರು: 02
* 20 ಮತಗಟ್ಟೆಗಳು.
* 20ನೇ ವಾರ್ಡ್​ನಲ್ಲಿ ಎರಡು ಮತಗಟ್ಟೆ ಸ್ಥಾಪನೆ

ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್​ಗಳಿದ್ದು, ಆ ಪೈಕಿ ಕಾಂಗ್ರೆಸ್ 23, ಬಿಜೆಪಿ 23, ಪಕ್ಷೇತರ 18, ಬಿಎಸ್‌ಪಿ 3, ಜೆಡಿಎಸ್ 1 ಮತ್ತು ಜೆಡಿಯು 1 ಸೇರಿದಂತೆ 69 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಕಂಪ್ಲಿ ಪುರಸಭೆ ವಿವರ:
* ಪುರುಷರು: 16,740
* ಮಹಿಳೆಯರು: 17,005
* ಇತರರು: 06

ಒಟ್ಟಾರೆಯಾಗಿ 23 ವಾರ್ಡ್​ಗಳು, 35 ಮತಗಟ್ಟೆಗಳು,7 ಸೂಕ್ಷ್ಮ ಮತಗಟ್ಟೆಗಳು ಸೇರಿದಂತೆ 2 ಅತೀ ಸೂಕ್ಷ್ಮ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

ABOUT THE AUTHOR

...view details