ಬಳ್ಳಾರಿ : ತಾಲೂಕಿನ ಶಂಕರಬಂಡೆ ಗ್ರಾಮ ಪಂಚಾಯತ್ನ ಶಂಕರಬಂಡೆ (ತೊಲಮಾಮಿಡಿ) ಕ್ಷೇತ್ರದ ಮತಪತ್ರದಲ್ಲಿ ಚಿಹ್ನೆ ಬದಲಾವಣೆಯಾಗಿರುವ ಹಿನ್ನೆಲೆ ಮರುಮತದಾನವನ್ನು ಇಂದು ನಡೆಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ತಿಳಿಸಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ಆದೇಶದ ಮೇರೆಗೆ ಡಿ.22 ರಂದು ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾ.ಪಂ. ಶಂಕರಬಂಡೆ ಕ್ಷೇತ್ರದ ಮತಪತ್ರದಲ್ಲಿ ಚಿಹ್ನೆ ಬದಲಾವಣೆಯಾಗಿರುವ ಹಿನ್ನೆಲೆಯಲ್ಲಿ ಅಂದು ನಡೆದ ಮತದಾನವನ್ನು ಅಸಿಂಧುವೆಂದು ಘೋಷಿಸಿ ಇಂದು ಮರು ಮತದಾನ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.