ವಿಜಯನಗರ: ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಬಿಸಿಎಂ ಇಲಾಖೆಯ ಕಚೇರಿ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿದ್ದ 10.50 ಲಕ್ಷ ರೂಪಾಯಿ ಹಣವನ್ನು ಕಳ್ಳನೊಬ್ಬ ಎಗರಿಸಿದ್ದಾನೆ. ಹೊಸಹಳ್ಳಿ ಗ್ರಾಮದ ಎಚ್.ಬಿ ವೀರಭದ್ರಪ್ಪ ಹಣ ಕಳೆದುಕೊಂಡಿದ್ದಾರೆ. ಇವರು ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ಹಾಗೂ ಪಿಜಿಬಿ ಬ್ಯಾಂಕಿನಲ್ಲಿ ಹಣ ಬಿಡಿಸಿಕೊಂಡು ಕಾರಿನಲ್ಲಿಟ್ಟಿದ್ದರು. ಬಳಿಕ ಬಿಸಿಎಂ ಇಲಾಖೆ ಕಚೇರಿ ಬಳಿ ಕಾರು ನಿಲ್ಲಿಸಿ ಅಧಿಕಾರಿಗಳ ಭೇಟಿಗೆಂದು ಕಚೇರಿಯೊಳಗೆ ಹೋಗಿದ್ದಾರೆ.
ವಿಜಯನಗರ: ಕಾರಿನ ಗಾಜು ಒಡೆದು 10 ಲಕ್ಷ ರೂಪಾಯಿ ಎಗರಿಸಿದ ಕಳ್ಳ
ಕಳ್ಳನೊಬ್ಬ ಕಾರಿನ ಗಾಜು ಒಡೆದು ಲಕ್ಷಾಂತರ ರೂಪಾಯಿ ಹಣವಿದ್ದ ಬ್ಯಾಗ್‌ನೊಂದಿಗೆ ಪರಾರಿಯಾದ ಘಟನೆ ವಿಜಯನಗರದಲ್ಲಿ ನಡೆದಿದೆ.
ವಿಜಯನಗರ
ಈ ವೇಳೆ ಕಳ್ಳನೊಬ್ಬ ಕಾರಿನ ಗಾಜು ಒಡೆದು ಲಕ್ಷಾಂತರ ಹಣವಿದ್ದ ಬ್ಯಾಗ್‌ನೊಂದಿಗೆ ಕಾಲ್ಕಿತ್ತಿದ್ದಾನೆ. ತಮ್ಮ ಕೆಲಸ ಮುಗಿಸಿ ಕಚೇರಿಯಿಂದ ಹೊರಬಂದ ವೀರಭದ್ರಪ್ಪ ಕಾರು ಹತ್ತಲು ಅಣಿಯಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್.ಹರಿಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಇದನ್ನೂ ಓದಿ:ಸ್ನೇಹಿತನ ಹೆಸರಿನಲ್ಲಿತ್ತು 4 ಕೋಟಿ ರೂ ವಿಮೆ: ಅಪಘಾತದಂತೆ ಬಿಂಬಿಸಿ ಕೊಲೆ