ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿರೋದು ಹಿಟ್ಲರ್ ಆಡಳಿತ.. ಕಾಂಗ್ರೆಸ್‌ ಶಾಸಕರಿಗಿಲ್ಲ ರಕ್ಷಣೆ - ಕಂಪ್ಲಿ ಎಂಎಲ್‌ಎ ಜೆ ಎನ್‌ ಗಣೇಶ್ - MLA JN Ganesha

ಮಾಜಿ ಶಾಸಕರಿಗೆ ಪ್ರೋಟೋ ಕಾಲ್ ನೀಡಿ ಎಸ್ಕಾರ್ಟ್ ಮೂಲಕ ಕರೆದುಕೊಂಡು ಬರಲಾಗುತ್ತಿದೆ. ಈ ವ್ಯವಸ್ಥೆ ದೇಶದಲ್ಲಿ ಎಲ್ಲಿಯಾದರೂ ಇದೆಯೇ?. ಈ ಕುರಿತು ನನ್ನ ಬಳಿ ವಿಡಿಯೋ‌ ಇದೆ. ಆದರೆ, ಇದರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ..

MLA JN Ganesha
ಶಾಸಕ ಜೆ.ಎನ್.ಗಣೇಶ್

By

Published : Nov 30, 2020, 2:04 PM IST

ಹೊಸಪೇಟೆ :ವಿಜಯನಗರ ಜಿಲ್ಲೆ ರಚನೆಯಲ್ಲಿ ಕಂಪ್ಲಿ ತಾಲೂಕು ಕೈಬಿಡಲಾಗಿದೆ. ಹಾಗಾದ್ರೆ ಯಾರ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಬಿಜೆಪಿ ಕಾರ್ಯಕರ್ತರಿಗೆ ಶಾಸಕ ಜೆ ಎನ್ ಗಣೇಶ್ ಪ್ರಶ್ನೆ ಮಾಡಿದರು.

ಕಂಪ್ಲಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ದೌರ್ಜನ್ಯ ಮಾಡುತ್ತಿದ್ದಾರೆ. ಕಂಪ್ಲಿಯನ್ನು ವಿಜಯನಗರ ಜಿಲ್ಲೆಯಿಂದ ರಾಜ್ಯ ಸರ್ಕಾರ ಕೈಬಿಟ್ಟಿದೆ. ಹಾಗಾಗಿ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಆಂಧ್ರದ ಅಥವಾ ಮಹಾರಾಷ್ಟ್ರದ ಮುಖ್ಯಮಂತ್ರಿ ವಿರುದ್ಧ ಹೋರಾಟ ಮಾಡುವುದಕ್ಕೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಹಿಟ್ಲರ್ ಆಡಳಿತವಿದೆ. ಕಾಂಗ್ರೆಸ್ ಶಾಸಕರು ಬಿಜೆಪಿ ವಿರುದ್ಧ ಮಾತನಾಡಿದ್ರೆ ಅವರನ್ನು ಬಿಡುತ್ತಿಲ್ಲ.‌ ಉದಾಹರಣೆಗೆ ಭೀಮಾನಾಯ್ಕ ಹಾಗೂ ನನ್ನ ಮೇಲೆ ಹೊಡೆಯೋದಕ್ಕೆ ಬಂದರೂ ಸಹ ಪೊಲೀಸ್ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕರಿಗೆ ಪ್ರೋಟೋ ಕಾಲ್ ನೀಡಿ ಎಸ್ಕಾರ್ಟ್ ಮೂಲಕ ಕರೆದುಕೊಂಡು ಬರಲಾಗುತ್ತಿದೆ. ಈ ವ್ಯವಸ್ಥೆ ದೇಶದಲ್ಲಿ ಎಲ್ಲಿಯಾದರೂ ಇದೆಯೇ?. ಈ ಕುರಿತು ನನ್ನ ಬಳಿ ವಿಡಿಯೋ‌ ಇದೆ. ಆದರೆ, ಇದರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಕಂಪ್ಲಿ ಸಕ್ಕರೆ ಕಾರ್ಖಾನೆ ಜನರ ಆಸ್ತಿ. 176 ಎಕರೆಯನ್ನು ಲೂಟಿ‌ ಮಾಡಲಾಗಿದೆ. ಇದರ ವಿರುದ್ಧವೂ ಹೋರಾಟ ಮಾಡಲಾಗುವುದು ಎಂದರು.

ABOUT THE AUTHOR

...view details