ಕರ್ನಾಟಕ

karnataka

ETV Bharat / state

ಬಳ್ಳಾರಿ: ರಂಗಭೂಮಿ ಕಲಾವಿದ ಕೋಗಳಿ ಪಂಪಣ್ಣ ವಿಧಿವಶ

ನಾಟಕ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಹಿರಿಯ ರಂಗಭೂಮಿ ಕಲಾವಿದ ಕೋಗಳಿ ಪಂಪಣ್ಣ ವಿಧಿವಶರಾಗಿದ್ದಾರೆ.

fsdfdf
ರಂಗಭೂಮಿ ಕಲಾವಿದ ಕೋಗಳಿ ಪಂಪಣ್ಣ ನಿಧನ

By

Published : Aug 6, 2020, 10:54 AM IST

ಬಳ್ಳಾರಿ/ಹೊಸಪೇಟೆ: ಖ್ಯಾತ ಹಿರಿಯ ರಂಗಭೂಮಿ ಕಲಾವಿದ ಕೋಗಳಿ ಪಂಪಣ್ಣ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದ ಪಂಪಣ್ಣ ರಂಗಭೂಮಿ ಕಲಾವಿದರಾಗಿದ್ದು, ಚಿಕ್ಕವಯಸ್ಸಿನಲ್ಲಿಯೇ ನಾಟಕಗಳಲ್ಲಿ ಅಭಿನಯಿಸುತ್ತ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಕಲೆ ಪ್ರದರ್ಶಿಸಿದ್ದರು. ರಕ್ತರಾತ್ರಿ, ಹೇಮರೆಡ್ಡಿ ಮಲ್ಲಮ್ಮ ಸೇರಿದಂತೆ ಹಲವು ಜನಪ್ರಿಯ ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಹಲವು ನಾಟಕಗಳನ್ನು ರಚಿಸಿದ್ದರು. 2002ರಲ್ಲಿ ವೆಂಕಟರಾವ್ ಘೋರ್ಪಡೆಯವರ ಜಿಲ್ಲಾ ಪಂಚಾಯತಿ ಅಧ್ಯಕ್ಷರ ಕಾಲಾವಧಿಯಲ್ಲಿ ಕೋಗಳಿ ಕ್ಷೇತ್ರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ರಕ್ತರಾತ್ರಿ ನಾಟಕದಲ್ಲಿ ಯಾವುದೇ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬಿ ಅಭಿನಯಿಸುತ್ತಿದ್ದರು. ಇತ್ತೀಚಿಗೆ ನಂದೀಪುರದ ಸ್ವಾಮೀಜಿ ಆಯೋಜಿಸಿದ್ದ ನುಡಿಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗ ಹಾಗೂ ಕಲಾಭಿಮಾನಿಗಳನ್ನು ಆಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರವನ್ನು ಹುಟ್ಟೂರಾದ ಕೋಗಳಿ ಗ್ರಾಮದಲ್ಲಿ ನೆರವೇರಿಸಲಾಗುತ್ತದೆ.

ABOUT THE AUTHOR

...view details