ಬಳ್ಳಾರಿ: ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ನಲ್ಲಿ ಮಣ್ಣಿನ ಮೂರ್ತಿ ಖರೀದಿಸಿ ಗಣೇಶ ಹಬ್ಬ ಆಚರಣೆ ಮಾಡಲು ಮುಂದಾಗಿದ್ದ ಸಾರ್ವಜನಿಕರು. ಮುಖ್ಯವಾಗಿ ಗಣೇಶನ ಮೂರ್ತಿಗಳನ್ನು ಮಾರಾಟ ಮಾಡುವ ಅಂಗಡಿಯ ಮಾಲೀಕರೇ ತಮ್ಮ ಅಂಗಡಿಗಳಿಗೆ ನಮ್ಮಲ್ಲಿ ಮಣ್ಣಿನ ಗಣಪತಿ ಮೂರ್ತಿಗಳು ದೊರೆಯುತ್ತವೆ ಎನ್ನುವ ನಾಮಫಲಕ ಹಾಕಿ ಮಾರಾಟ ಮಾಡುತ್ತಿದ್ದದ್ದು ವಿಶೇಷವಾಗಿತ್ತು.
ಮಣ್ಣಿನ ಗಣಪತಿ ಖರೀದಿಸಲು ಬಂದ ಚಂದ್ರಕಾಂತ ಅವರು, ಈಟಿವಿ ಭಾರತನೊಂದಿಗೆ ಮಾತನಾಡಿ ಮನೆಗಳಲ್ಲಿ ಮತ್ತು ಸಮಾಜದಲ್ಲಿ ಪ್ಲಾಸ್ಟಿಕ್ ಬಳಕೆ ದಿನನಿತ್ಯ ಜೀವನದಲ್ಲಿ ಬಳಕೆಯ ಪ್ರಮಾಣ ನಾಗಲೋಟವಾಗಿ ಮುಂದುವರೆಯುತ್ತಿದೆ. ಆದರೆ ಗಣಪತಿ ಹಬ್ಬ ಆಚರಣೆಯ ಸಮಯದಲ್ಲಿ ಮಣ್ಣಿನ ಗಣಪತಿ ಖರೀದಿಸಿ, ಪಿಒಪಿ ಬಳಸದೇ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಿ ಎಂದು ಕೇಳಿಕೊಂಡರು.