ಕರ್ನಾಟಕ

karnataka

ಬಳ್ಳಾರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪದವಿ ಕಾಲೇಜು ಸ್ಥಾಪಿಸಲು ಮನವಿ

By

Published : Jan 3, 2020, 8:35 AM IST

ಬಳ್ಳಾರಿ‌ಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪದವಿ ಕಾಲೇಜು ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಪನ್ನರಾಜ್ ಸರ್ಕಾರಕ್ಕೆ ಮನವಿ ಮಾಡಿದರು.

Students appealing to establish a graduate college
ಪನ್ನರಾಜ್

ಬಳ್ಳಾರಿ‌:ನಗರದ ಹೊರವಲಯದ ಹಗರಿ ಬಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪದವಿ ಕಾಲೇಜು ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಪನ್ನರಾಜ್, ಎಡಿಸಿ ಮಂಜುನಾಥ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

2020-2021 ರ ಬಜೆಟ್​ನಲ್ಲಿ ಬಳ್ಳಾರಿ ಕೃಷಿ ವಿಶ್ವವಿದ್ಯಾಲಯಕ್ಕೆ 50 ಕೋಟಿ ರೂ ಮೀಸಲಿಡಬೇಕು ಮತ್ತು ಆಡಳಿತಾತ್ಮಕವಾಗಿ ಅನುಮೋದನೆ ನೀಡಬೇಕು. ಮುಖ್ಯವಾಗಿ ಡಿ.ಎಂ.ಎಫ್ ಹಣದಲ್ಲಿ 50 ಕೋಟಿ ರೂ. ಹಣ ನೀಡಬಹುದು ಹಾಗೂ ಕೆ.ಎಂ.ಆರ್.ಸಿಯಲ್ಲಿ 50 ಕೋಟಿ ರೂ. ಹಣ ನೀಡಬಹುದು ಎಂದು ಹಿಂದಿನ ಎಲ್ಲಾ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಕೃಷಿ ಕಾಲೇಜಿ​ನಿಂದ ಸರ್ಕಾರಕ್ಕೆ ಯಾವುದೇ ರೀತಿಯ ಆರ್ಥಿಕ ಹೊಣೆಯಿಲ್ಲದೇ ಕಾಲೇಜು ಆರಂಭಿಸಬಹುದು ಎಂದು ಪನ್ನರಾಜ್‌ ತಿಳಿಸಿದರು.

ಪದವಿ ಕಾಲೇಜು ಸ್ಥಾಪನೆಗೆ ಒತ್ತಾಯ

ರೈತ ಮಾಧವ ರೆಡ್ಡಿ ಮಾತನಾಡಿ, ಈ ಕೃಷಿ ಕಾಲೇಜು ಆರಂಭವಾಗುವುದರಿಂದ ಬಹಳಷ್ಟು ಮಕ್ಕಳಿಗೆ ಅನುಕೂಲವಾಗುತ್ತದೆ. ಇಂದಿನ ದಿನಮಾನಗಳಲ್ಲಿ ಇಂಜಿನಿಯರಿಂಗ್ ಓದಿದರೂ ಕೆಲಸ ಸಿಗದ ಪರಿಸ್ಥಿತಿಯಿದೆ. ಹಾಗಾಗಿ ಕೃಷಿ ಕಾಲೇಜು ಆರಂಭಿಸಿದರೆ ಸ್ವಯಂ ಉದ್ಯೋಗ ಮಾಡಬಹುದು. ರೈತರ ಮಕ್ಕಳಿಗೆ ಕೃಷಿ ಕಾಲೇಜು​ಗಳಲ್ಲಿ ಓದಿಸುವ ಮೂಲಕ ಮಕ್ಕಳನ್ನು ಕೃಷಿ ಕ್ಷೇತ್ರದತ್ತ ಸೆಳೆಯುತ್ತೇವೆ ಎಂದರು.

For All Latest Updates

TAGGED:

ABOUT THE AUTHOR

...view details