ಬಳ್ಳಾರಿ:ಗಣಿನಗರಿ ಬಳ್ಳಾರಿಯ ನಡು ರಸ್ತೆಯಲ್ಲೇ ಬಿಡಾಡಿ ದನಗಳು ಬೀಡುಬಿಟ್ಟಿದ್ದು, ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿವೆ.
ನಡು ರಸ್ತೆಯಲ್ಲೇ ಬೀಡುಬಿಟ್ಟ ಬಿಡಾಡಿ ದನಗಳು... ಬಳ್ಳಾರಿಯಲ್ಲಿ ಸಂಚಾರಕ್ಕೆ ಅಡ್ಡಿ! - ಗಣಿನಗರಿ
ಕಳೆದ ಕೆಲ ದಿನಗಳಿಂದ ಬಿಡಾಡಿ ದನಗಳು ನಗರದ ರಸ್ತೆಗಳಲ್ಲಿ ಬೀಡು ಬಿಟ್ಟಿದ್ದು, ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯುಂಟು ಮಾಡುತ್ತಿವೆ. ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
bellary publics
ಇಷ್ಟೆಲ್ಲ ಸಮಸ್ಯೆಗಳನ್ನು ಜನರು ಅನುಭವಿಸುತ್ತಿದ್ದರೂ, ಬಿಡಾಡಿ ದನಗಳನ್ನು ಊರಾಚೆಗೆ ಕಳಿಸುವ ಯಾವ ಕ್ರಮವನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದು, ಕೂಡಲೇ ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿದ್ದಾರೆ.