ಕರ್ನಾಟಕ

karnataka

ETV Bharat / state

15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯೇ ಗೆಲ್ಲಲಿದೆ... ಕಾಂಗ್ರೆಸ್​ ನಾಯಕರಿಗೆ  ಶ್ರೀರಾಮುಲು ಸವಾಲ್​

ನಾನು ಗಡ್ಡ ಬಿಟ್ಟು ಸನ್ಯಾಸ ದೀಕ್ಷೆಯನ್ನು ಪಡೆದುಕೊಂಡಿದ್ದೇನೆಂದು ಕೆಲವರು ಹೇಳುತ್ತಾರೆ. ನಮ್ಮ ದೇಶದ ಸಂಸ್ಕೃತಿ ತಿಳಿದುಕೊಂಡು ಅವರು ಮತಾಡಬೇಕೆಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಸಚಿವ ಶ್ರೀರಾಮುಲು ಟಾಂಗ್ ನೀಡಿದ್ದಾರೆ.

ಆನಂದ್ ಸಿಂಗ್ ಪರ ಶ್ರೀರಾಮುಲು ಮತಬೇಟೆ
ಆನಂದ್ ಸಿಂಗ್ ಪರ ಶ್ರೀರಾಮುಲು ಮತಬೇಟೆ

By

Published : Dec 3, 2019, 5:01 AM IST

ಹೊಸಪೇಟೆ: ನಾನು ಗಡ್ಡ ಬಿಟ್ಟು ಸನ್ಯಾಸ ದೀಕ್ಷೆಯನ್ನು ಪಡೆದುಕೊಂಡಿದ್ದೇನೆಂದು ಕುಮಾರಸ್ವಾಮಿ ನನ್ನನ್ನು ಜರಿಯುವ ಮೊದಲು ನಮ್ಮ ದೇಶದ ಸಂಸ್ಕೃತಿ ತಿಳಿದುಕೊಂಡು ಅವರು ಮತಾಡಬೇಕೆಂದು ಸಚಿವ ಶ್ರೀರಾಮುಲು ಕಿಡಿಕಾರಿದ್ದಾರೆ.

ಹೊಸಪೇಟೆಯಲ್ಲಿ ಆನಂದ್​ಸಿಂಗ್​ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಕುಮಾರಸ್ವಾಮಿಯವರು ನನಗೆ ಅಷ್ಟೇ ಅಲ್ಲ, ಕಾವಿ ಬಟ್ಟೆಯನ್ನು ಧರಿಸಿದವರೆಲ್ಲರಿಗೂ ಅವವಾನ ಮಾಡಿದ್ದಾರೆಂದು ಆರೋಪಿಸಿದರು. ಗಡ್ಡ ಬಿಡುವುದು ಹಿಂದೂ ಧರ್ಮದ ಸಂಸ್ಕೃತಿಯಾಗಿದೆ. ದೇಶದಲ್ಲಿ ಋಷಿ ಮುನಿಗಳು ಕಾವಿ ಬಟ್ಟೆಯನ್ನು ಧರಿಸಿಕೊಂಡು, ದೇಶದ ಜನರು ಸುಖ ಶಾಂತಿಯಿಂದಿರಲು ತಪಸ್ಸನ್ನು ಮಾಡುತ್ತಿರುತ್ತಾರೆ. ಇದನ್ನು ಕುಮಾರಸ್ವಾಮಿಯವರು ಅರಿಯಬೇಕು ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಮತ್ತೊಮ್ಮೆ ಸರಕಾರವನ್ನು ನಡೆಸುವ ಚಿಂತನೆಯಲ್ಲಿದ್ದಾರೆ. ಅಲ್ಲದೆ ಅವರು ಎಲ್ಲಾ ಪ್ರಚಾರ ಸಭೆಯಲ್ಲೂ ಮಧ್ಯಂತರ ಚುನಾವಣೆ ಬರಲಿದೆ ಎಂದು ಭಾಷಣೆ ಮಾಡುತ್ತಿದ್ದಾರೆ. ಆದರೆ 15 ಕ್ಷೇತ್ರಗಳಲ್ಲೂ ಭಾರತೀಯ ಜನತಾಪಾರ್ಟಿ ಗೆಲ್ಲಲಿದೆ. ನೀವೆಲ್ಲರೂ ಕೂಡ ಬಿಜೆಪಿಗೆ ಮತ ಹಾಕಿ ಬಿಎಸ್​ವೈ ಅವರನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಆನಂದ್ ಸಿಂಗ್ ಪರ ಶ್ರೀರಾಮುಲು ಮತಬೇಟೆ

ಆನಂದ್ ಸಿಂಗ್ ಪರ 'ತಾರಾ' ಮೆರಗು

ಆನಂದ ಸಿಂಗ್ ಅವರು ನನಗೆ ಅಣ್ಣನಿದ್ದಂತೆ. ಅವರು ಎರಡು ಬಾರಿ ಬಿಜೆಪಿಯಿಂದ ಗೆದ್ದಿದ್ದರು ಎಂದು ವಿಧಾನಪರಿಷತ್ ಸದಸ್ಯೆ ತಾರಾ ಹೇಳಿದರು. ಕೆಲ ಕಾರಣಗಳಿಂದಾಗಿ ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದರು. ಇದೀಗ ಅವರು ಮರಳಿ ಪಕ್ಷಕ್ಕೆ ಬಂದಿರುವುದು ನಮ್ಮ ಶಕ್ತಿ ಹೆಚ್ಚಿಸಿದೆ ಎಂದರು.

ಆನಂದ ಸಿಂಗ್ ಈ ಭಾಗದಲ್ಲಿ ಅಭಿವೃದ್ಧಿ ಕೆಲಸವನ್ನು ಮಾಡಿದ ವ್ಯಕ್ತಿ. ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು. ಸಮ್ಮಿಶ್ರ ಸರ್ಕಾರದಲ್ಲಿ ಹದಿನಾಲ್ಕು ತಿಂಗಳು ಯಾವ ರೀತಿಯ ಆಡಳಿತವನ್ನು ಮಾಡಿದ್ದಾರೆ ಎನ್ನುವುದು ರಾಜ್ಯಕ್ಕೆ ಗೊತ್ತಿದೆ. ಅಂತಹ ಅತಂತ್ರ ಸರ್ಕಾರವನ್ನು ಜನತೆ ಮೆಚ್ಚಿಕೊಳ್ಳುವುದಿಲ್ಲ ಹಾಗಾಗಿ ಸುಭದ್ರ ಸರ್ಕಾರಕ್ಕಾಗಿ ಆನಂದ್ ಸಿಂಗ್ ಅವರನ್ನು ಗೆಲ್ಲಿಸಬೇಕಿದೆ ಎಂದರು.

ABOUT THE AUTHOR

...view details