ಕರ್ನಾಟಕ

karnataka

ETV Bharat / state

ಪ್ರಧಾನಿ ಮೋದಿ ಪದಗ್ರಹಣ: ಅಭಿಮಾನಿಯಿಂದ ದೀರ್ಘದಂಡ ನಮಸ್ಕಾರ ಹರಕೆ - ಪ್ರಧಾನಿ

ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂದು ಹರಕೆ ಹೊತ್ತುಕೊಂಡಿದ್ದ ವ್ಯಕ್ತಿಯೊಬ್ಬರು ಇವತ್ತು ಹತ್ತಾರು ಕಿಲೋ ಮೀಟರುಗಳವರೆಗೆ ದೀರ್ಘದಂಡ ನಮಸ್ಕಾರ ಹಾಕಿದರು.

ದೀರ್ಘದಂಡ ನಮಸ್ಕಾರ ಮೂಲಕ ಹರಕೆ ತೀರಿಸಿದ ನಮೋ ಭಕ್ತ

By

Published : May 30, 2019, 9:41 AM IST

ಬಳ್ಳಾರಿ:ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿಯಿಂದ ಕೊಟ್ಟೂರಿನವರೆಗೆ ಅಭಿಮಾನಿಯೊಬ್ಬರು ರಸ್ತೆಯುದ್ಧಕ್ಕೂ ದೀರ್ಘದಂಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದರು.

ಜಿಲ್ಲೆಯ‌ ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದ ಪರಮೇಶ್ವರ ದೇಗುಲದಲ್ಲಿಂದು ಬೆಳಿಗ್ಗೆ 6 ಗಂಟೆಗೆ ವಿಶೇಷಪೂಜೆ ಸಲ್ಲಿಸಿದ ಮೋದಿ ಅಭಿಮಾನಿ ರಾಜಣ್ಣ ಬಾರಿಕರ, ದೀರ್ಘದಂಡ ನಮಸ್ಕಾರ ಶುರು ಮಾಡಿದರು. ಅಂದಾಜು 26 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬರುವ ಕಲ್ಲಳ್ಳಿ, ದೂಪದಹಳ್ಳಿ, ಬೆಣ್ಣೆಕಲ್ಲು, ಯಾಳೆ ಮಾರ್ಗವಾಗಿ ಕೊಟ್ಟೂರಿನ ಕೊಟ್ಟೂರೇಶ್ವರ ದೇಗುಲದವರೆಗೆ ದೀರ್ಫದಂಡ ನಮಸ್ಕಾರ ಹಾಕುತ್ತಾ ಸಾಗಿದರು.

ದೀರ್ಘದಂಡ ನಮಸ್ಕಾರ ಮೂಲಕ ಹರಕೆ ತೀರಿಸಿದ ನಮೋ ಭಕ್ತ

ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಅಭಿಲಾಷೆ ಎಸ್.ರಾಜಣ್ಣ ಬಾರಿಕರ ಅವರದ್ದಾಗಿತ್ತು. ಇವತ್ತು ಮೋದಿಯವರು ಪ್ರಮಾಣ ವಚನ ಸ್ವೀಕರಿಸುತ್ತಿರುವುದರಿಂದ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸುತ್ತಿರುವುದಾಗಿ ರಾಜಣ್ಣ ಹೇಳಿದರು.

ಹನಸಿಯಿಂದ ಕೊಟ್ಟೂರಿನವರಿಗೆ ಅವರು ಬರಿಗಾಲಲ್ಲೇ ರಸ್ತೆಯುದ್ದಕ್ಕೂ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದಾರೆ. ತಾಷಾರಾಂಡೋಲ್, ಸಮಳಾ ವಾದ್ಯಮೇಳದೊಂದಿಗೆ ಎಸ್.ರಾಜಣ್ಣ ಅವರನ್ನ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗುತ್ತಿದ್ದು, ದಾರಿಯುದ್ದಕ್ಕೂ ಎರಡು ಟ್ರ್ಯಾಕ್ಟರ್ ಹಾಗೂ ಸರಕು ಸಾಗಣೆ ಆಟೋ ರಿಕ್ಷಾದಲ್ಲಿ ನೀರನ್ನು ತುಂಬಿಕೊಂಡು ಪ್ರತಿಯೊಂದು ದೀರ್ಘ ದಂಡ ನಮಸ್ಕಾರದ ಬಳಿಕ ರಾಜಣ್ಣ ಅವರ ಮೇಲೆ ನೀರು ಹಾಕಲಾಗುತ್ತಿದೆ.

ಟಿ ಶರ್ಟ್-ಪ್ಯಾಂಟ್ ಧರಿಸಿದ ರಾಜಣ್ಣ:

ದೀರ್ಘ ದಂಡ ನಮಸ್ಕಾರ ಹಾಕುವ ವೇಳೆ, ರಾಜಣ್ಣ ಟೀ ಶರ್ಟ್ ಹಾಗೂ ಪ್ಯಾಂಟ್ ಧರಿಸಿದ್ದು, ಮನೆಮಂದಿಯೆಲ್ಲ ಅವರಿಗೆ ಸಾಥ್ ಕೊಟ್ಟಿದ್ದಾರೆ.

ಗ್ರಾಮಸ್ಥರ ಬೆಂಬಲ:

ಹನಸಿ ಸೇರಿದಂತೆ ಇತರೆ ಗ್ರಾಮಗಳ ಗ್ರಾಮಸ್ಥರು ರಾಜಣ್ಣನಿಗೆ ಬೆಂಬಲ ವ್ಯಕ್ತಪಡಿಸಿದ್ದು, ಬಿಜೆಪಿಯ ಭಾವುಟ ಹಿಡಿದುಕೊಂಡು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ABOUT THE AUTHOR

...view details