ಕರ್ನಾಟಕ

karnataka

ETV Bharat / state

ದೇಗುಲದ ಹೊಸ್ತಿಲಿನ ಹೊರಗೆ ದಲಿತರಿಂದ ಶ್ರಾವಣ ಮಾಸದ ಪೂಜೆ..! - ಪೊಲೀಸ್ ಇಲಾಖೆ

ಗಣಿನಾಡಿನ ದೇಗುಲಗಳಲ್ಲಿ ದಲಿತರ ಪ್ರವೇಶ ನಿಷೇಧಿಸಿದ್ದು, ಜಿಲ್ಲೆಯ ನಾನಾ ದೇಗುಲಗಳ ಪ್ರವೇಶ ದ್ವಾರದ ಹೊಸ್ತಿಲಿನಲ್ಲೇ ಶ್ರಾವಣ ಮಾಸದ ಪೂಜೆ ನಿರ್ವಹಿಸಲಾಗುತ್ತದೆ.

ದೇಗುಲದ ಹೊಸ್ತಿಲಿನ ಹೊರಗೆ ದಲಿತರಿಂದ ಶ್ರಾವಣ ಮಾಸದ ಪೂಜೆ..!

By

Published : Aug 9, 2019, 12:02 AM IST

ಬಳ್ಳಾರಿ:ಗಣಿನಾಡಿನ ದೇಗುಲಗಳಲ್ಲಿ ದಲಿತರ ಪ್ರವೇಶವನ್ನು ನಿಷೇಧಿಸಲಾಗಿದೆ. ಜಿಲ್ಲೆಯ ನಾನಾ ದೇಗುಲಗಳ ಪ್ರವೇಶ ದ್ವಾರದ ಹೊಸ್ತಿಲಿನಲ್ಲೇ ಶ್ರಾವಣ ಮಾಸದ ಪೂಜೆ ಕೈಂಕರ್ಯ ಗಳನ್ನು ನಿರ್ವಹಿಸಲಾಗುತ್ತದೆ.

ದೇಗುಲದ ಹೊಸ್ತಿಲಿನ ಹೊರಗೆ ದಲಿತರಿಂದ ಶ್ರಾವಣ ಮಾಸದ ಪೂಜೆ..!

ಬೆಳ್ಳಂಬೆಳಗ್ಗೆ ದಲಿತ ಕುಟುಂಬಗಳು ಮಡೆಸ್ನಾನ ಕೈಗೊಂಡು ಜಿಲ್ಲೆಯ ಆಯಾ ದೇಗುಲಗಳಲ್ಲಿನ ದೇವರ ದರುಶನಕ್ಕೆ ಬರುತ್ತಾರೆ. ಆದರೆ, ದೇಗುಲಗಳ ಆಡಳಿತ ಮಂಡಳಿ ಹಾಗೂ ಪ್ರಧಾನ ಅರ್ಚಕರು ದಲಿತ ಕುಟುಂಬ ಸದಸ್ಯರನ್ನು ಆಯಾ ದೇಗುಲಗಳ ಹೊಸ್ತಿಲಿನ ಹೊರಗಡೆಯೇ ಕುಳ್ಳಿರಿಸಿ ರುದ್ರಾಭಿಷೇಕ ಪೂಜೆ ಮಾಡಲಾಗುತ್ತದೆ. ಇಂತಹ ಪ್ರಕರಣಗಳು ಇಂದಿನ ಅತ್ಯಾಧುನಿಕ ಯುಗದಲ್ಲಿ ಜೀವಂತವಾಗಿವೆ. ಅಂತಹ ಅಪ ರೂಪದ ಪ್ರಕರಣಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಹಾಗೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ.

ಜಿಲ್ಲೆಯ ಪ್ರಮುಖ ದೇಗುಲಗಳಿಗೆ ಭೇಟಿ ನೀಡುವ ದಲಿತ ಕುಟುಂಬ ಸದಸ್ಯರನ್ನ ತುಚ್ಛವಾಗಿ ಕಾಣಲಾಗುತ್ತದೆ. ಜಿಲ್ಲೆಯ ನಾನಾ ಗ್ರಾಮಗಳಲ್ಲಿನ ಹೊಟೇಲ್​ಗಳಲ್ಲಿ ದಲಿತರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ.‌ ಮೇಲ್ವರ್ಗದವರಿಗೆ ಎತ್ತರದ ಆಸನಗಳ ವ್ಯವಸ್ಥೆ ಮಾಡಿದರೆ, ದಲಿತ ಕುಟುಂಬ ಗಳಿಗೆ ಎತ್ತರ ಕಡಿಮೆ ಇರುವ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಟೀ ಕುಡಿಯಲು ಪ್ರತ್ಯೇಕ ಲೋಟದ ವ್ಯವಸ್ಥೆ ಮಾಡಲಾಗಿದೆ. ಒಂದು ರೀತಿಯಾಗಿ ದಲಿತರನ್ನು ಕನಿಷ್ಠರಲ್ಲಿ ಕನಿಷ್ಠರಂತೆ ಕಾಣಲಾಗುತ್ತದೆ ಎಂಬ ದೂರುಗಳೂ ಕೂಡ ಜಿಲ್ಲಾದ್ಯಂತ ಕೇಳಿ ಬರುತ್ತಿವೆ.

ದೇಗುಲಗಳ ಹೊಸ್ತಿಲಲ್ಲೇ ದಲಿತರ ವಿಶೇಷ ಪೂಜೆ:

ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ವೀರಭದ್ರೇಶ್ವರ ದೇಗುಲ, ಶಂಭುಲಿಂಗ ದೇಗುಲ, ಹುಲಿಕುಂಟೇಶ್ವರ ದೇಗುಲ, ಮೈಲಾರ ಲಿಂಗೇಶ್ವರ, ಹುಲಿಕುಂಟೆರಾಯ ದೇಗುಲ, ಜಂಭುನಾಥ ದೇಗುಲ, ರಾಘವೇಂದ್ರಸ್ವಾಮಿ ದೇಗುಲ, ಕೊಟ್ಟೂರಿನ‌ ಕೊಟ್ಟೂರೇಶ್ವರ ದೇಗುಲ, ಸಣ್ಣಕ್ಕಿ ವೀರಭದ್ರೇಶ್ವರ ದೇಗುಲ ಸೇರಿದಂತೆ ಇನ್ನಿತರ ಪ್ರಖ್ಯಾತ ದೇಗುಲಗಳಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತದೆ.‌ ಈ ಎಲ್ಲ ದೇಗುಲಗಳಲ್ಲಿ ದಲಿತರಿಗೆ ಹೊಸ್ತಿಲಲ್ಲೇ ವಿಶೇಷಪೂಜೆ ಸಲ್ಲಿಸುವ ಅವಕಾಶ ಕಲ್ಪಿಸುವ ಮುಖೇನ ದಲಿತರನ್ನು ಕಡೆಗಣಿಸಲಾಗುತ್ತದೆ.‌

ABOUT THE AUTHOR

...view details