ಕರ್ನಾಟಕ

karnataka

ETV Bharat / state

ಕೋವಿಡ್​ ಲಸಿಕೆ ಪಡೆದಿದ್ದಕ್ಕೆ ಹಲವು ಕಾಯಿಲೆಗಳು ಗುಣಮುಖವಾದವಂತೆ:ಎಲ್ಲಿ? - ಹೊಸಪೇಟೆಯಲ್ಲಿ ಕೊರೊನಾ

ಕೊರೊನಾಗೆ ರಾಮಬಾಣವಾಗಿರುವ ಲಸಿಕೆ ಪಡೆದಿದ್ದಕ್ಕೆ ನಮಗೆ ಹಲವು ಕಾಯಿಲೆಗಳು ಗುಣಮುಖವಾಗಿವೆ ಎಂದು ವಿಜಯನಗರ ಜಿಲ್ಲೆಯಲ್ಲಿ ಹಲವು ವ್ಯಕ್ತಿಗಳು ಹೇಳಿ ಕೊಂಡಿದ್ದಾರೆ.

person-said-many-diseases-are-cured-by-covishield-vaccine
ಲಸಿಕೆ ಪಡೆದಿದ್ದಕ್ಕೆ ಹಲವು ಕಾಯಿಲೆಗಳು ಗುಣಮುಖವಾದವಂತೆ

By

Published : Jun 17, 2021, 6:12 PM IST

Updated : Jun 18, 2021, 2:56 PM IST

ಹೊಸಪೇಟೆ (ವಿಜಯನಗರ): ಕೋವಿಡ್​ ಲಸಿಕೆ ಹಾಕಿಸಿಕೊಂಡ ನಂತರ 10 ವರ್ಷದ ಕಾಯಿಲೆಯಿಂದ ಗುಣಮುಖನಾಗಿದ್ದೇನೆ ಎಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಅನೇಕರು ಹೇಳಿಕೊಂಡಿದ್ದಾರೆ. ಪಾಲಾಕ್ಷ( 49), ಬಸವೇಶ(50) ಎಂಬುವರು ಕೀಲು ನೋವು ಸೇರಿದಂತೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದರು. ಲಸಿಕೆ ಹಾಕಿಸಿಕೊಂಡ ಬಳಿಕ ಕಾಯಿಲೆ ಗುಣಮುಖವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಬಸವೇಶ ಎಂಬುವವರಿಗೆ ಹಲವು ವರ್ಷದಿಂದ ಕೀಲು-ನೋವು ಇತ್ತು. ಮೈ-ಕೈ ನೋವಿನಿಂದಲೂ ರಳುತ್ತಿದ್ದರು. ಅನೇಕ ವರ್ಷಗಳಿಂದ ಆಸ್ಪತ್ರೆ ಸುತ್ತಿದರೂ ವಾಸಿಯಾಗಿರಲಿಲ್ಲ. ಏಪ್ರಿಲ್ 05ರಂದು ಫಸ್ಟ್ ಡೋಸ್ ಲಸಿಕೆ ಪಡೆದ ಬಳಿಕ ಕಾಯಿಲೆ ವಾಸಿಯಾಗಿದೆ ಎಂದು ಅವರೇ ಹೇಳಿಕೊಂಡಿದ್ದಾರೆ.

ಲಸಿಕೆ ಪಡೆದಿದ್ದಕ್ಕೆ ಹಲವು ಕಾಯಿಲೆಗಳು ಗುಣಮುಖವಾದವಂತೆ

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿರುವ ಡಿಎಚ್ಒ ಜನಾರ್ದನ್, ಬಸವೇಶ ಎನ್ನುವವರಿಗೆ ಕಾಯಿಲೆಗಳು ಗುಣವಾಗಿರುವುದು ಸಂತಸದ ಸಂಗತಿಯಾಗಿದೆ. ಆದರೆ ಲಸಿಕೆ ಪಡೆದ ಬಳಿಕ ಕಾಯಿಲೆ ಗುಣಮುಖವಾಗಿರುವ ಬಗ್ಗೆ ವೈಜ್ಞಾನಿಕ ಪುರಾವೆಗಳಿಲ್ಲ. ಪಾಲಾಕ್ಷ ಎನ್ನುವವರೂ ಗುಣಮುಖವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಲಸಿಕೆಯಿಂದಲೇ ಗುಣಮುಖವಾಗಿರುವುದರ ಬಗ್ಗೆ ಸಂಶೋಧನೆಯಿಂದ ಖಚಿತಪಡಿಸಿಕೊಳ್ಳಬೇಕು. ಬಸವೇಶ, ಪಾಲಾಕ್ಷ ಅವರಿಂದ ಎಲ್ಲ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದಿದ್ದಾರೆ.

ಓದಿ:ಸುರತ್ಕಲ್​ನಲ್ಲಿ ಅಪ್ಪನಿಂದಲೇ ಪುತ್ರಿಯರ ಮೇಲೆ ನಿರಂತರ ಅತ್ಯಾಚಾರ: ಕಾಮುಕ ತಂದೆ ಕಂಬಿ ಹಿಂದೆ

Last Updated : Jun 18, 2021, 2:56 PM IST

ABOUT THE AUTHOR

...view details