ಬಳ್ಳಾರಿ :ಮಹಾನಗರ ಪಾಲಿಕೆಗೆ 220 ಕೋಟಿ ರೂ. ಯುಜಿಡಿ ಅನುದಾನ ಒದಗಿಸುವಂತೆ ಕೋರಿ ನಗರಾಭಿವೃದ್ಧಿ ಸಚಿವರಿಗೆ ಶಾಸಕ ಸೋಮಶೇಖರ್ ರೆಡ್ಡಿ ಮನವಿ ಸಲ್ಲಿಸಿದರು.
ಅನುದಾನ ಕೋರಿ ನಗರಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿದ ಶಾಸಕ ಸೋಮಶೇಖರ್ ರೆಡ್ಡಿ - UGD grants
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರನ್ನು ಭೇಟಿಯಾದ ಶಾಸಕ ಸೋಮಶೇಖರ್ ರೆಡ್ಡಿ, ಬಳ್ಳಾರಿ ಮಹಾನಗರ ಪಾಲಿಕೆಗೆ 220 ಕೋಟಿ ರೂ.ಯುಜಿಡಿ ಅನುದಾನ ಒದಗಿಸುವಂತೆ ಮನವಿ ಪತ್ರ ಸಲ್ಲಿಸಿದರು.
ನಗರಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿದ ಶಾಸಕ ಸೋಮಶೇಖರ್ ರೆಡ್ಡಿ
ಬೆಂಗಳೂರಿನಲ್ಲಿ ಇಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಅವರು, ಮಹಾನಗರ ಪಾಲಿಕೆಗೆ ಯುಜಿಡಿ ಅನುದಾನದಡಿಯಲ್ಲಿ ಅಂದಾಜು 220 ಕೋಟಿ ರೂ. ಗಳನ್ನು ಒದಗಿಸುವಂತೆ ಕೋರಿದರು. ಮನವಿ ಆಲಿಸಿದ ಸಚಿವರು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕ ವೀರಶೇಖರ್ ರೆಡ್ಡಿ ಹಾಗೂ ಮುಖಂಡ ಶ್ರೀನಿವಾಸ್ ಮೋತ್ಕರ್ ಅವರು ಉಪಸ್ಥಿತರಿದ್ದರು.