ಸೋಮಶೇಖರ್ ರೆಡ್ಡಿ ಮಾಧ್ಯಮಗೋಷ್ಟಿ ಬಳ್ಳಾರಿ: ನಾನು ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಸಹೋದರ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪಿಸಿದರೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಹೇಳಿದರು.
ಪಕ್ಷದ ನೂತನ ಜಿಲ್ಲಾ ಕಚೇರಿ ಉದ್ಘಾಟನೆ ಸಂಬಂಧ ಮಂಗಳವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಬಿಜೆಪಿಗೆ ಬಂದರೆ ಪಕ್ಷಕ್ಕೆ ಭಾರಿ ಲಾಭವಾಗುತ್ತದೆ ಎಂದು ಈ ಹಿಂದೆಯೇ ಸಾಮೂಹಿಕ ವಿವಾಹದಲ್ಲಿ ಹೇಳಿದ್ದೆ. ಅವರು ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದರು.
ಇದನ್ನೂ ಓದಿ:ಇಂದು ನಮ್ಮ ನಾಯಕರೇ ನಮಗೇ ತೊಂದರೆ ಕೊಡುತ್ತಿದ್ದಾರೆ.. ಗಾಲಿ ಜನಾರ್ದನ ರೆಡ್ಡಿ ಅಸಮಾಧಾನ
ಹೇಮರೆಡ್ಡಿ ಮಲ್ಲಮ್ಮ ಕುಲದ ಸಂಪೂರ್ಣ ಬೆಂಬಲ ಜನಾರ್ದನ ರೆಡ್ಡಿಯವರಿಗಿದೆ. ಈ ನಿಟ್ಟಿನಲ್ಲಿ ಶ್ರೀರಾಮುಲು ಮತ್ತು ಹಲವು ಹಿತೈಷಿಗಳು ಜನಾರ್ದನರೆಡ್ಡಿ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ರಾಷ್ಟ್ರೀಯ ನಾಯಕರಲ್ಲಿ ಮನವಿ ಮಾಡುತ್ತಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದು ಹೇಳಿದರು.
ಇದನ್ನೂ ಓದಿ:ಮೂರ್ನಾಲ್ಕು ಶಾಸಕರು ಬಿಜೆಪಿಗೆ ಬರಲಿದ್ದಾರೆ: ಶಾಸಕ ಜಿ ಸೋಮಶೇಖರ್ ರೆಡ್ಡಿ