ಕರ್ನಾಟಕ

karnataka

ETV Bharat / state

ಸಿದ್ಧಾರ್ಥ್​ ನಾಪತ್ತೆ: ಮಂತ್ರಾಲಯ ಶ್ರೀ ಕಳವಳ - ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಕಳವಳ

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅಳಿಯ ಹಾಗೂ ಕಾಫಿ ಡೇ ಮಾಲೀಕ ಸಿದ್ಧಾರ್ಥ್​ ನಾಪತ್ತೆಯಾಗಿರೋದಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ

By

Published : Jul 30, 2019, 10:18 PM IST

ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್​ ನಾಪತ್ತೆಯಾಗಿರೋದಕ್ಕೆ ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.ಜಿಲ್ಲೆಯ ಹೊಸಪೇಟೆ ನಗರದ ರಾಣಿಪೇಟೆ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿಂದು

ಚಾರ್ತುಮಾಸದ ನಿಮಿತ್ತ ಭಕ್ತರಿಗೆ ತಪ್ತ ಮುದ್ರಾಧಾರಣೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ಧಾರ್ಥ್​ ಅವರು ಕಣ್ಮರೆಯಾಗಿರೋದು ಬೇಸರದ ಸಂಗತಿ. ಸಿದ್ಧಾರ್ಥ್​ ಹಾಗೂ ಎಸ್.ಎಂ. ಕೃಷ್ಣ ಮೊದಲಿನಿಂದಲೂ ಮಠದೊಂದಿಗೆ ಉತ್ತಮ ಒಡನಾಟ ಹೊಂದಿದ್ದರು ಎಂದರು ತಿಳಿಸಿದರು.

ಸಿದ್ಧಾರ್ಥ ನಾಪತ್ತೆ: ಮಂತ್ರಾಲಯ ಶ್ರೀ ಕಳವಳ

ಯಾವುದೇ ತೊಂದರೆಯಾಗದಂತೆ ದೇವರು ಹಾಗೂ ಗುರುರಾಯರು ಸುರಕ್ಷಿತವಾಗಿ ಸಿದ್ಧಾರ್ಥ್​ ಅವರನ್ನುವಾಪಸ್ ಮನೆಗೆ ಕರೆತರಲಿ ಎಂದರು. ಮಂತ್ರಾಲಯದಲ್ಲಿ ಇಂದು 7ನೇ ಚಾರ್ತುಮಾಸ ವ್ರತದಲ್ಲಿ ಶ್ರೀರಾಯರ ಕೋಟಿ ಸುಳಾದಿ ಜಪಯಜ್ಞ ಸೇರಿದಂತೆ ಧಾರ್ಮಿಕ, ಆಧ್ಯಾತ್ಮಿಕ, ಹೋಮ, ಹವನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ABOUT THE AUTHOR

...view details