ಬಳ್ಳಾರಿ:ಕೂಡ್ಲಿಗಿ ತಾಲೂಕಿನ ಹುಡಂ ಗ್ರಾಮ ಪಂಚಾಯಿತಿಗೆ ಸೇರಿದ ತಾಯಕನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಶಾಲೆಯ ಆವರಣದಲ್ಲಿಯೇ ಹರಿಯುವ ಕಿರಿದಾದ ಚರಂಡಿ ನೀರು.
ಅಂಗನವಾಡಿ ಪಕ್ಕದಲ್ಲಿಯೇ ಚರಂಡಿ :

ಶಾಲೆಯ ಆವರಣದಲ್ಲಿಯೇ ಅಂಗನವಾಡಿ ಕೇಂದ್ರವಿದೆ. ಇಲ್ಲಿ ಹತ್ತಾರು ಮಕ್ಕಳಿದ್ದಾರೆ. ಈದ್ರ ಆವರಣದಲ್ಲಿಯೇ ಚರಂಡಿ ನೀರು ಹರಿಯುವುದರಿಂದ ಮಕ್ಕಳಿಗೆ ಸುಳ್ಳೆಗಳು ಕಡಿಯುತ್ತವೆ. ಅಲ್ಲದೇ ಹುಳ, ಇಲಿ, ಹಾವು, ಕಪ್ಪೆಗಳು ಬರುತ್ತಿವೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ಮತ್ತು ಸದಸ್ಯರ ಬೇಜವಾಬ್ದಾರಿತನದಿಂದ ಕಲುಷಿತ ಚರಂಡಿ ನೀರು ನೇರವಾಗಿ ಶಾಲೆಯ ಆವರಣದ ಒಳಗಡೆ ನುಗ್ಗಿ ಮಕ್ಕಳಿಗೆ ತೊಂದರೆಯಾಗುತ್ತಿದೆ. ಅಷ್ಟೇ ಅಲ್ಲದೇ, ಕಲುಷಿತ ನೀರೂ ಕೂಡಾ ಬರುವುದರಿಂದ ರೋಗರುಜಿನಗಳಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಉಮಾಪತಿ ದೂರಿದರು.
ಅನೇಕ ಬಾರಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ಹೇಳಿ ಮತ್ತು ಲಿಖಿತ ದೂರು ನೀಡಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ ಎನ್ನಲಾಗಿದೆ.
ಗ್ರಾಮದಲ್ಲಿನ ನೀರು ನೇರವಾಗಿ ಶಾಲೆಯ ಆವರಣದೊಳಗೆ ನುಗ್ಗುತ್ತಿದೆ. ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು, ಶಾಲೆಯ ಶಿಕ್ಷಕರು ಎಷ್ಟೇ ಪ್ರಯತ್ನ ಮಾಡಿದ್ರೂ, ಇದುವರೆಗೆ ಕ್ರಮ ಜರುಗಿಸಿ ಚರಂಡಿಯ ನೀರನ್ನು ಬೇರೆ ಕಡೆ ಬಿಡುವ ಕೆಲಸವಾಗಿಲ್ಲ ಎಂದು ದೂರಲಾಗಿದೆ.