ಕರ್ನಾಟಕ

karnataka

ETV Bharat / state

ಬೈಕ್-ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಸ್ಕಾರ್ಪಿಯೋ ಕಾರ್​: ಬೈಕ್ ಸವಾರ ಸಾವು, ಆಟೋ ಚಾಲಕನಿಗೆ ಗಾಯ! - ballary car and byke accident

ಬಳ್ಳಾರಿ ತಾಲೂಕಿನ ಬೇವಿನಹಳ್ಳಿ ಗ್ರಾಮದ ಬಳಿ ಸ್ಕಾರ್ಪಿಯೋ ವಾಹನವೊಂದು ಮುಂಬದಿಯಲ್ಲಿ ಚಲಿಸುತ್ತಿದ್ದ ಬೈಕ್- ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು,ಆಟೋ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ballary
ಅಪಘಾತ

By

Published : Sep 9, 2020, 10:59 PM IST

ಬಳ್ಳಾರಿ: ತಾಲೂಕಿನ ಬೇವಿನಹಳ್ಳಿ ಗ್ರಾಮದ ಬಳಿ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಸ್ಕಾರ್ಪಿಯೋ ವಾಹನವೊಂದು ಮುಂಬದಿಯಲ್ಲಿ ಚಲಿಸುತ್ತಿದ್ದ ಬೈಕ್- ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದು,ಆಟೋ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಬಳ್ಳಾರಿ ತಾಲೂಕಿನ ಯಾಳ್ಪಿ ಕಗ್ಗಲ್ ಗ್ರಾಮದ ನಿವಾಸಿ ಜಗದೀಶ ಗೌಡ (55) ಮೃತಪಟ್ಟ ವ್ಯಕ್ತಿ. ‌ಬಾದನಹಟ್ಟಿ ಗ್ರಾಮದ ನಿವಾಸಿ ಯರಿಸ್ವಾಮಿ‌(35) ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ.

ಸ್ಕಾರ್ಪಿಯೋ ಕಾರ್ ಬೈಕ್- ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸಾವನ್ನಪ್ಪಿದ್ದಾನೆ.

ಬಳ್ಳಾರಿ ನಗರದಿಂದ ಬೇವಿನಹಳ್ಳಿ ಗ್ರಾಮದ ಮಾರ್ಗವಾಗಿ ಯಾಳ್ಪಿ ಗ್ರಾಮಕ್ಕೆ ಚಲಿಸುತ್ತಿದ್ದ ಜಗದೀಶಗೌಡ ಹಾಗೂ ಚೆಳ್ಳಗುರ್ಕಿ ಗ್ರಾಮಕ್ಕೆ ತೆರಳುತ್ತಿದ್ದ ಯರಿಸ್ವಾಮಿ , ಬೇವಿನಹಳ್ಳಿ‌ ಗ್ರಾಮದ ಸಮೀಪ ಹಿಂದೆ-ಮುಂದೆ ಚಲಿಸುತ್ತಿರುವಾಗ ಅವರೆಡರ ಹಿಂಬದಿಯಿಂದ ಅತಿ ವೇಗ ಮತ್ತು ಅಜಾಗರೂಕತೆಯಿಂದ ಸ್ಕಾರ್ಪಿಯೋ ಕಾರನ್ನು ಚಲಾಯಿಸಿಕೊಂಡು ಬಂದು ಎಕಾಏಕಿ ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ.‌ ಆ ಮೇಲೆ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆಂದು ಪಿಎಸ್​ಐ ವೈ.ಎಸ್.ಹನುಮಂತಪ್ಪ ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಅಪಘಾತ:

ರೂಪನಗುಡಿ ಹೋಬಳಿಯಿಂದ ಶಂಕರಬಂಡೆ ಗ್ರಾಮದ ಮಾರ್ಗವಾಗಿ ತಿರುಮಲ ನಗರ ಕ್ಯಾಂಪಿನ ಬಳಿ ಬೈಕ್​ನಲ್ಲಿ ಸಂಚರಿಸುತ್ತಿರುವಾಗ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡಿದ್ದ ರೂಪನಗುಡಿ ಪಂಪಾಪತಿ (65) ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ ಕ್ಷಣಾರ್ಧದಲ್ಲಿ ಸಾವನ್ನಪ್ಪಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details