ಬಳ್ಳಾರಿ: ಗಣಿನಾಡಲ್ಲಿ ಮತ್ತೆ ಮಚ್ಚು ಲಾಂಗುಗಳ ಸದ್ದು ಕೇಳಿ ಬಂದಿದೆ. ನಗರದಲ್ಲಿ ರೌಡಿ ಶೀಟರ್ ಆಗಿ ಗುರುತಿಸಿಕೊಂಡಿದ್ದ ಸಿ.ಟಿ. ರಮೇಶ್ ಬರ್ಬರವಾಗಿ ಹತ್ಯೆಯಾಗಿದ್ದಾನೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಗಣಿ ನಾಡಿನ ರೌಡಿ ಶೀಟರ್ ಸಿ.ಡಿ. ರಮೇಶ್ ಬರ್ಬರ ಹತ್ಯೆ
ಗಣಿ ಜಿಲ್ಲೆಯಲ್ಲಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಕೌಲ್ ಬಜಾರ್ ಪ್ರದೇಶದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಳಿ ರೌಡಿಶೀಟರ್ ಸಿ.ಡಿ. ರಮೇಶ್ನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಗಣಿನಾಡಿನ ರೌಡಿ ಶೀಟರ್ ಸಿ.ಡಿ ರಮೇಶ್ ಬರ್ಬರ ಹತ್ಯೆ
ನಗರದ ಕೌಲ್ ಬಜಾರ್ ಪ್ರದೇಶದ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಬಳಿ ಘಟನೆ ನಡೆದಿದ್ದು, ಸ್ಥಳಕ್ಕೆ ಕೌಲ್ ಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಇದಕ್ಕೂ ಮೊದಲು ರಮೇಶ್ ಸಹೋದರ ಸಿ.ಡಿ. ರವಿಯನ್ನೂ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.