ಬಳ್ಳಾರಿ:ಜಿಲ್ಲೆಯಲ್ಲಿಆಳವಾದ ತಗ್ಗು-ದಿನ್ನೆ ಹಾಗೂ ಧೂಳಿನಿಂದ ಕೂಡಿದ ರಸ್ತೆಗಳಲ್ಲೇ ಜನರು ಸಂಚರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಬಳ್ಳಾರಿಯಿಂದ ಹೊಸಪೇಟೆ ತಾಲೂಕಿಗೆ (66 ಕಿ.ಮೀ.) ಪ್ರಯಾಣ ಬೆಳೆಸಲು ಸುಮಾರು ಎರಡೂವರೆ ಗಂಟೆ ಬೇಕಾಗುತ್ತದೆ. ಇನ್ನು ಮಳೆಗಾಲದಲ್ಲಿ ವಾಹನ ಸವಾರರು ಮತ್ತಷ್ಟು ನರಕ ಅನುಭವಿಸುತ್ತಾರೆ.
ಬಳ್ಳಾರಿ ನಗರದಿಂದ ಕುಡಿತಿನಿಗೆ ತಲುಪಲು ಕಾಲು ಗಂಟೆ, ಕುಡಿತಿನಿ ಪಟ್ಟಣದಿಂದ ತೋರಣಗಲ್ಲಿಗೆ ತೆರಳಲು ಮುಕ್ಕಾಲು ಗಂಟೆ ಬೇಕಾಗುತ್ತದೆ. ಈ ಮಾರ್ಗದಲ್ಲಿ ದೊಡ್ಡದಾದ ಮತ್ತು ಆಳುದ್ದ ಗುಂಡಿಗಳೇ ಹೆಚ್ಚಿದ್ದು, ಲಘು ಮತ್ತು ಭಾರೀ ವಾಹನಗಳು ಸೇರಿದಂತೆ ಕೆಎಸ್ಆರ್ಟಿಸಿ ಬಸ್ಗಳೂ ಈ ಮಾರ್ಗದಲ್ಲೇ ಸಂಚರಿಸುತ್ತಿವೆ. ಇವತ್ತು ನಾವು ಮನೆ ಮುಟ್ಟಿದ ಹಾಗೆ ಎಂದು ಸವಾರರು ಗೊಣಗೋದಂತೂ ನಿಜ. ಅಂತಹ ಕೆಟ್ಟ ಪರಿಸ್ಥಿತಿಯಲ್ಲಿ ಈ ರಸ್ತೆಗಳಿವೆ.