ಕರ್ನಾಟಕ

karnataka

ETV Bharat / state

ಹೋಮ್ ​ಗಾರ್ಡ್​ಗಳಿಂದ ವಸತಿ ಗೃಹ ಸ್ವಚ್ಛ

ಬಳ್ಳಾರಿ ಐಜಿ ನಂಜುಂಡಸ್ವಾಮಿ ಡಿಎಆರ್ ಪೊಲೀಸ್ ವಸತಿ ಗೃಹಗಳ ಭೇಟಿಗಾಗಿ ಬರುವ ಕಾರಣ ಕಳೆದ ಮೂರು ದಿನಗಳಿಂದ ಪೊಲೀಸ್ ವಸತಿ ಗೃಹದ ಆವರಣದಲ್ಲಿನ ತ್ಯಾಜ್ಯವನ್ನು ಹೋಮ್​ ಗಾರ್ಡ್​ಗಳಿಂದ ಸ್ವಚ್ಛ ಮಾಡಿಸಲಾಗಿದೆ.

ಹೋಮ್ ​ಗಾರ್ಡ್​ಗಳಿಂದ ವಸತಿ ಗೃಹ ಸ್ವಚ್ಛ...!

By

Published : Nov 16, 2019, 12:00 PM IST

ಬಳ್ಳಾರಿ : ಬಳ್ಳಾರಿ ಐಜಿ ನಂಜುಂಡಸ್ವಾಮಿ ಡಿಎಆರ್ ಪೊಲೀಸ್ ವಸತಿ ಗೃಹಗಳ ಭೇಟಿಗಾಗಿ ಬರುವ ಕಾರಣ ಕಳೆದ ಮೂರು ದಿನಗಳಿಂದ ಪೊಲೀಸ್ ವಸತಿ ಗೃಹದ ಆವರಣದಲ್ಲಿನ ತ್ಯಾಜ್ಯವನ್ನು ಹೋಮ್ ​ಗಾರ್ಡ್​ಗಳಿಂದ ಸ್ವಚ್ಛ ಮಾಡಿಸಲಾಗಿದೆ.

ಹೋಮ್ ​ಗಾರ್ಡ್​ಗಳಿಂದ ವಸತಿ ಗೃಹ ಸ್ವಚ್ಛತೆ

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿನ ಪೊಲೀಸ್ ಪೇದೆ ಮತ್ತು ಅಧಿಕಾರಿಗಳು ವಸತಿ ಗೃಹಗಳ ಸುತ್ತಲೂ ಇರುವ ಕಸ, ಚರಂಡಿ ಮತ್ತು ತ್ಯಾಜ್ಯವನ್ನು 53 ಹೋಮ್ ​ಗಾರ್ಡ್​ಗಳಿಂದ ಸ್ವಚ್ಛ ಮಾಡಿಸಿದ್ದಾರೆ. ಆದ್ರೆ ಪಾಲಿಕೆಯಿಂದ ಮಾಡಿಸಬೇಕಾದ ಕೆಲಸವನ್ನು ಹೋಮ್ ​ಗಾರ್ಡ್​ಗಳಿಂದ ಮಾಡಿಸುತ್ತಿದ್ದಾರೆಂದು ತಿಳಿದ ಅಧಿಕಾರಿಗಳು ಈ‌ ರೀತಿಯ ಕೆಲಸ ಹೇಗೆ ಮಾಡಿಸಿದ್ರಿ? ಎಂದು ಪ್ರಶ್ನಿಸಿದ್ದಾರೆ.

ಈ ವಿಚಾರವನ್ನ ಹೋಮ್ ಗಾರ್ಡ್​ ಕಮಾಂಡೆಂಟ್ ಶಕೀಬ್ ಅವರು ಡಿ.ಎ.ಆರ್ - ಡಿವೈಎಸ್ಪಿ ಸಿದ್ದನಗೌಡ ಪಾಟೀಲ್ ಅವರಿಗೆ ಫೋನ್​ ಕರೆ ಮೂಲಕ ಮಾತನಾಡಿ, ಪೊಲೀಸ್ ಇಲಾಖೆ ವಸತಿ ಗೃಹದ ಆವರಣದಲ್ಲಿನ ಚರಂಡಿ, ತ್ಯಾಜ್ಯಗಳನ್ನು ಎತ್ತಿಸುವ ಕೆಲಸ ಹೋಮ್ ಗಾರ್ಡ್ ಅವರೊಂದಿಗೆ ಮಾಡಿಸಿದ ವಿಡಿಯೊ, ಫೋಟೋ ನೋಡಿದ್ದೇನೆ. ಹಾಗೆ ಮಾಡಿಸುವಾಗಿಲ್ಲವೆಂದು ಎಚ್ಚರಿಕೆ ನೀಡಿದರು.

ಈಟಿವಿ ಭಾರತದೊಂದಿಗೆ ಮಾತನಾಡಿದ ಹೋಮ್ ಗಾರ್ಡ್​ ಕಮಾಂಡೆಂಟ್ ಶಕೀಬ್, 2013ರಲ್ಲಿ 162 ಹೋಮ್ ಗಾರ್ಡ್​ಗಳನ್ನು ಸಿವಿಲ್ ಪೊಲೀಸ್ ಇಲಾಖೆ ಸೆಂಟ್ರಿ, ಎಸ್ಕಾಟ್, ರೆಟಿನ್ ಇನ್ನಿತರ ಕೆಲಸಗಳಿಂದ ಪೊಲೀಸ್​ ಇಲಾಖೆಯಲ್ಲಿ ಕೆಲಸ ನೀಡಿದ್ದೇವೆ. ಆದರಂತೆ 2019 ನವೆಂಬರ್ 8 ರಿಂದ 53 ಹೋಮ್ ಗಾರ್ಡ್​ಗಳನ್ನು ಡಿ.ಎ.ಆರ್​ಗೆ ನೀಡಲಾಗಿದೆ. ಇನ್ನೂ ಈ ರೀತಿಯ ಕೆಲಸಗಳು ಮುಂದಿನ ದಿನಗಳಲ್ಲಿ ಆಗದಂತೆ ನೋಡಿಕೊಳ್ಳುತ್ತೆವೆಂದು ತಿಳಿಸಿದರು.

ಈ ರೀತಿಯ ಕೆಲಸ ಮಾಡಿಸಿ ಸಿಬ್ಬಂದಿಗೆ ಅನಾರೋಗ್ಯಪೀಡಿತರಾದ್ರೆ ನಮ್ಮನ್ನು ನೋಡಿಕೊಳ್ಳುವವರಾರೆಂದು ಪ್ರಶ್ನೆ ಮಾಡಿದ ಗೃಹರಕ್ಷಕ ದಳದ ಸಿಬ್ಬಂದಿಗಳು ತಮ್ಮ ನೋವನ್ನು ದೂರವಾಣಿ ಮೂಲಕ ಈಟಿವಿ ಭಾರತದೊಂದಿಗೆ ಹೇಳಿಕೊಂಡಿದ್ದಾರೆ.

ABOUT THE AUTHOR

...view details