ಬಳ್ಳಾರಿ: ಎಸ್ ಟಿ ಸಮುದಾಯಕ್ಕೆ 7.5 ಮೀಸಲಾತಿ ಹೆಚ್ಚಳ ವಿಚಾರವಾಗಿ ರಚಿಸಲಾದ ಸಬ್ ಕಮಿಟಿ ವರದಿ ಶೀಘ್ರವೇ ಸಿಎಂ ಬಿಎಸ್ ಯಡಿಯೂರಪ್ಪ ಕೈಸೇರಲಿದೆ. ಆ ಬಳಿಕ, ಮೀಸಲಾತಿ ಘೋಷಣೆ ಮಾಡ್ಬೇಕೋ ಅಥವಾ ಬೇಡವೊ ಎಂಬ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬರಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಸ್ಪಷ್ಪನೆ ನೀಡಿದ್ದಾರೆ.
ಬಳ್ಳಾರಿಯ ಕೋಟೆ ಮಲ್ಲೇಶ್ವರ ದೇಗುಲದ ಜೀರ್ಣೋದ್ಧಾರ ಕಾರ್ಯವನ್ನ ವೀಕ್ಷಿಸಿದ ಬಳಿಕ ಈಟಿವಿ ಭಾರತದೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, ಎಸ್ ಟಿ ಸಮುದಾಯಕ್ಕೆ ಶೇಕಡ 7.5 ರಷ್ಟು ಹಾಗೂ ಎಸ್ಸಿ ಸಮುದಾಯದ ಉಪ ಜಾತಿಗಳಿಗೆ ಶೇಕಡಾ 17 ರಷ್ಟು ಮೀಸಲಾತಿ ನೀಡಬೇಕೆಂಬ ವಿಚಾರ ಸಚಿವ ಸಂಪುಟದ ಸಭೆಯಲ್ಲಿ ಚರ್ಚೆಗೆ ಬಂದಾಗ, ಸಿಎಂ ಬಿ ಎಸ್ ಯಡಿ ಯೂರಪ್ಪ ಸಬ್ ಕಮಿಟಿ ರಚನೆ ಮಾಡಿ, ನಿಮ್ಮನ್ನೇ ಆ ಸಬ್ ಕಮಿಟಿ ಚೇರ್ ಮನ್ ಆಗಿ ನೇಮಿಸುತ್ತೇವೆ ಎಂದಿದ್ದರು. ಅದರಂತೆಯೇ ಸಬ್ ಕಮಿಟಿ ರಚನೆಯಾಗಿದೆ. ಇನ್ನೊಂದು ಎರಡ್ಮೂರು ಮೀಟಿಂಗ್ ಆಗುವಷ್ಟರಲ್ಲಿಯೇ ಸಬ್ ಕಮಿಟಿಯ ವರದಿಯು ಸಿಎಂ ಬಿಎಸ್ ಯಡಿಯೂರಪ್ಪ ಕೈ ಸೇರಲಿದೆ. ಆ ಬಳಿಕ, ಈ ಮೀಸಲಾತಿ ಘೋಷಣೆ ಮಾಡೋ ವಿಚಾರವನ್ನ ಸಿಎಂ ಬಿಎಸ್ ಯಡಿಯೂರಪ್ಪ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.