ಕರ್ನಾಟಕ

karnataka

ETV Bharat / state

ನೀವೂ ನಮ್ಮಂತೆ ಸಂಭ್ರಮಿಸಿ.. ಬಳ್ಳಾರಿಯಲ್ಲಿ ರಂಜಾನ್‌ಗಾಗಿ ಬಡ ಮುಸ್ಲಿಂ ಬಾಂಧವರಿಗೆ ರೇಷನ್ ಕಿಟ್ ವಿತರಣೆ - ಅಡುಗೆ

ಬಡತನ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡು ಯಾರೊಬ್ಬ ಮುಸ್ಲಿಂ ಬಾಂಧವರು ಈದ್ ಮಿಲಾದ್ ಸಂಭ್ರಮದಿಂದ ಹೊರಗುಳಿಯಬಾರದೆಂಬ ಉದ್ದೇಶದೊಂದಿಗೆ ಈ ರೇಷನ್ ಕಿಟ್‌ನ ವಿತರಿಸಲಾಗುತ್ತಿದೆ.

ಬಡ ಮುಸ್ಲಿಂ ಬಾಂಧವರಿಗೆ ರೇಷನ್ ಕಿಟ್ ವಿತರಣೆ

By

Published : May 28, 2019, 8:08 AM IST

ಬಳ್ಳಾರಿ :ನಗರದ ಕೌಲ್ ಬಜಾರ್ ವ್ಯಾಪ್ತಿಯ ಹಳೆಯ ಎಂಪ್ಲಾಯ್‌ಮೆಂಟ್ ಕಚೇರಿಯ ಬಳಿಯಿರುವ ಮೊಹದ್ದೀಸೆ ಅಜಮ್ ಮಿಷನ್ ವತಿಯಿಂದ ರಂಜಾನ್ ಹಬ್ಬದ ಪ್ರಯುಕ್ತ 116 ಮಂದಿ ಬಡ ಮುಸ್ಲಿಂ ಧರ್ಮಿಯರಿಗೆ ರೇಷನ್ ಕಿಟ್ ವಿತರಿಸಲಾಯಿತು.

ಮೊಹದ್ದೀಸೆ ಅಜಮ್ ಮಿಷನ್ ಪೀಠಾಧಿಪತಿ ಸೈಯ್ಯದ್ ಹಸನ್ ಅಸ್ಕರಿ ಹಸ್ರಫಿಯವರ ಆದೇಶದ ಮೇರೆಗೆ 21ನೇ ರಂಜಾನ್ ಹಬ್ಬ ಇದಾಗಿದ್ದು, ಬಡತನ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡು ಯಾರೊಬ್ಬ ಮುಸ್ಲಿಂ ಬಾಂಧವರು ಈದ್ ಮಿಲಾದ್ ಸಂಭ್ರಮದಿಂದ ಹೊರಗುಳಿಯಬಾರದೆಂಬ ಉದ್ದೇಶದೊಂದಿಗೆ ಈ ರೇಷನ್ ಕಿಟ್‌ನ ವಿತರಿಸಲಾಗುತ್ತಿದೆ ಎಂದು ಶಬ್ಬೀರ್ ಅಸ್ರಫಿ, ಜೈನುಲ್ಲಾ ತಿಳಿಸಿದ್ದಾರೆ.

ಬಡ ಮುಸ್ಲಿಂ ಬಾಂಧವರಿಗೆ ರೇಷನ್ ಕಿಟ್ ವಿತರಣೆ

ಬಳ್ಳಾರಿಯ ಕೌಲ್ ಬಜಾರ್ ಪ್ರದೇಶ, ಹಳೆ ಕಮೇಲಾ ರಸ್ತೆ, ಮಿಲ್ಲರ್ ಪೇಟೆ, ಪ್ರಶಾಂತ್ ನಗರ ಸೇರಿ ಇತರೆಡೆಯಿಂದ ಆಗಮಿಸಿದ ನೂರಾರು ಮಂದಿ ಬಡ ಮುಸ್ಲಿಂ ಬಾಂಧವರಿಗೆ ಈ ಕಿಟ್ ವಿತರಿಸಲಾಗಿದೆ. ರಂಜಾನ್ ಹಬ್ಬದ ಸಂಭ್ರಮದ ಬಳಿಕ ಮಾರನೇ ದಿನ ಈದ್ ಮಿಲಾದ್ ಆಚರಣೆಯ ವೇಳೆ ಈ ಕಿಟ್‌ನ ಬಳಕೆ ಮಾಡುವಷ್ಟು ರೇಷನ್ ಇದರಲ್ಲಿದೆ.‌ ಮಾಂಸ ಹೊರತುಪಡಿಸಿ, ಉಳಿದೆಲ್ಲಾ ಅಡುಗೆ ತಯಾರಿಕಾ ಪದಾರ್ಥಗಳು ಇದರಲ್ಲಿವೆ ಎನ್ನುತ್ತಾರೆ ಶಬ್ಬೀರ್.

ರೇಷನ್ ಕಿಟ್​ನಲ್ಲೇನಿದೆ? :

ಬಡ ಮುಸ್ಲಿಂ ಬಾಂಧವರಿಗೆ ವಿತರಿಸಲಾದ ಈ ರೇಷನ್ ಕಿಟ್​ನಲ್ಲಿ ಅಕ್ಕಿ, ಹಾಲು, ಗೋಡಂಬಿ, ಒಣದ್ರಾಕ್ಷಿ, ತುಪ್ಪ, ಏಲಕ್ಕಿ, ಲವಂಗ, ದನಿಯಾ ಹಾಗೂ ಎರಡೆರಡು ಕೆಜಿ ಅಕ್ಕಿ ಮತ್ತು ಗೋಧಿ ಇದರಲ್ಲಿದೆ.

ABOUT THE AUTHOR

...view details