ಬಳ್ಳಾರಿ:ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಗರ ಆರ್ಯ ವೈಶ್ಯ ಒಕ್ಕೂಟ, ಪೆಟ್ರೋಲ್ ಡೀಲರ್ಸ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಜಿಲ್ಲೆ ವಿಭಜನೆ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ಆರ್ಯ ವೈಶ್ಯ ಸಮಾಜದ ಅಧ್ಯಕ್ಷರಾದ ಡಾ. ಡಿ.ಎಲ್. ರಮೇಶ್ ಗೋಪಾಲ ಮಾತನಾಡಿ, ಬಳ್ಳಾರಿ ವಿಭಜನೆ ಮಾಡಬೇಕು, ಆಗಿದೆ ಎನ್ನುವ ಮಾಹಿತಿ ಬಂದಿದೆ. ಪ್ರೀ ನೋಟಿಫಿಕೇಶ್ ಸಹ ಆಗಿದೆ. ಇದರಲ್ಲಿ ಮುಖ್ಯವಾಗಿ ಡಿ.ಎಂ.ಎಫ್ ನಿಂದ ಏಳರಿಂದ ಎಂಟು ಸಾವಿರ ಕೋಟಿ ಬರುತ್ತಿದೆ ಎಂದರು.
ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ ಬಳ್ಳಾರಿ ವಿಭಜನೆ ಆದ್ರೆ, ಹೊಸಪೇಟೆಗೆ ಎಷ್ಟು, ಬಳ್ಳಾರಿಗೆ ಎಷ್ಟು ಉಳಿಯುತ್ತೆ ಅಂತಾನೇ ಗೊತ್ತಾಗಲ್ಲ. ಅಭಿವೃದ್ದಿ ಕುರಿತು ಆಲೋಚನೆ ಮಾಡುವುದಾದರೆ ಇದು ವ್ಯರ್ಥವಾಗುತ್ತೆ ಎಂದರು.
ಓದಿ:ಗೆದ್ದ ಅಭ್ಯರ್ಥಿಯ ಕೊರಳಿಗೆ ವಿಜಯಮಾಲೆ: ದೊಡ್ಡಬಳ್ಳಾಪುರದಲ್ಲಿ ಹೂಮಾಲೆಗೆ ಭಾರಿ ಬೇಡಿಕೆ
ಜ್ಯುವೆಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಆರ್.ಜಿ. ಪ್ರಭು ಮಾತನಾಡಿ, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ ಅಂತ 35, 60 ಕಿಲೋಮೀಟರ್ ಗೆ ಒಂದೊಂದು ಜಿಲ್ಲೆಯನ್ನು ಮಾಡುತ್ತಾ ಹೊರಟರೆ ಅದಕ್ಕೆ ಅರ್ಥವಿರಲ್ಲ. ಆದ್ದರಿಂದ ವಿಭಜನೆ ಮಾಡುವುದು ಬೇಡ ಎಂದರು.
ನಂತರ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಗೋಪಾಲಕೃಷ್ಣ ಮಾತನಾಡಿ, ವಿಭಜನೆ ಮಾಡ್ತಾ ಇರೋದು ನಮಗೆ ಬಹಳ ಅಸಮಾಧಾನ ಇದೆ. ಜಿಲ್ಲೆಯನ್ನು ವಿಭಜನೆ ಮಾಡಿ, ಮೂರು ತಾಲೂಕುಗಳನ್ನು ಬಳ್ಳಾರಿಗೆ, ಐದು ತಾಲೂಕುಗಳನ್ನು ಹೊಸಪೇಟೆಗೆ ಮಾಡಿದ್ರೆ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ಗೂ ಸಮಸ್ಯೆ ಆಗುತ್ತದೆ ಎಂದರು.