ಬಳ್ಳಾರಿ: ಆಂಧ್ರಪ್ರದೇಶದ ನಾನಾ ಭಾಗದಿಂದ ಬಳ್ಳಾರಿಗೆ ಬರುವ ರಸ್ತೆಗಳನ್ನು ಬಂದ್ ಮಾಡುವುದು ಹಾಗು ಮದ್ಯ ಮಾರಾಟದ ವಿಚಾರವಾಗಿ ಸಚಿವ ಆನಂದ್ ಸಿಂಗ್ ಮತ್ತು ಶಾಸಕ ನಾಗೇಂದ್ರ ನಡುವೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಟಾಪಟಿ ನಡೆಯಿತು.
ಬಳ್ಳಾರಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ, ಸಚಿವರ ನಡುವೆ ಜಟಾಪಟಿ
ಗಡಿಭಾಗದಲ್ಲಿ ವೈನ್ಶಾಪ್ ಬಂದ್ ಮಾಡಬೇಕೆಂದು ಶಾಸಕ ನಾಗೇಂದ್ರ ಅವರನ್ನು ಒತ್ತಾಯಿಸಿದ್ದು, ಈ ವಿಚಾರವಾಗಿ ಪರಸ್ಪರ ವಾಗ್ವಾದ ನಡೆಯಿತು.
ಬಳ್ಳಾರಿಯಲ್ಲಿ ಪ್ರಗತಿಪರಿಶೀಲನಾ ಸಭೆಯಲ್ಲಿ ಶಾಸಕ ಸಚಿವರ ನಡುವೆ ಜಟಾಪಟಿ...
ಗಡಿಭಾಗದಲ್ಲಿ ವೈನ್ಶಾಪ್ ಬಂದ್ ಮಾಡಬೇಕೆಂದು ಶಾಸಕ ನಾಗೇಂದ್ರ ಅವರನ್ನು ಒತ್ತಾಯಿಸಿದ್ದು, ಈ ವಿಚಾರವಾಗಿ ಪರಸ್ಪರ ವಾಗ್ವಾದ ನಡೆಯಿತು. ಸಚಿವ ಮತ್ತು ಶಾಸಕರ ನಡುವೆ ವಾಗ್ವಾದವನ್ನು ಸಚಿವ ಬೈರತಿ ಬಸವರಾಜ್ ಮಧ್ಯಪ್ರವೇಶಿಸಿ ತಣ್ಣಗಾಗಿಸಿದ್ದಾರೆ. ಈ ಸಭೆ ಬಳಿಕ ಒಂದಾಗಿ ಬಂದು ನಾಯಕರು ಮಾತನಾಡಿದರು.
ಈ ವೇಳೆ ಡಿಸಿ, ಎಸ್ಪಿ, ಸಿಇಒ, ಅಪರ ಜಿಲ್ಲಾಧಿಕಾರಿ, ಸಂಸದ ದೇವೆಂದ್ರಪ್ಪ, ಶಾಸಕ ಜಿ.ಸೋಮಶೇಖರ್ ರೆಡ್ಡಿ ಹಾಜರಿದ್ದರು.