ಬಳ್ಳಾರಿ:ಜಿಲ್ಲೆಯ ಸಂಡೂರು ಪಟ್ಟಣದ ಪ್ರದೇಶವೊಂದರಲ್ಲಿನ ಒಂದೇ ಕುಟುಂಬದಲ್ಲಿ ಮಹಾಮಾರಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯೆ ಖಾಸಗಿ ಶಾಲೆಯ ಶಿಕ್ಷಕಿ (32) ಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೋವಿಡ್ ಭೀತಿ; ಖಾಸಗಿ ಶಾಲಾ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ..!
ತನಗೆ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಮಗನನ್ನು ತನ್ನ ಬಳಿ ಬಿಡದ ಕಾರಣ ಖಿನ್ನತೆಗೆ ಒಳಗಾದ ಖಾಸಗಿ ಶಾಲಾ ಶಿಕ್ಷಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಡೂರು ಪಟ್ಟಣದಲ್ಲಿ ನಡೆದಿದೆ.
ಸಂಡೂರು ಪಟ್ಟಣದ ಇವರು ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ. ತನ್ನ ಮನೆಯಲ್ಲಿಯೇ ಗಂಡನ ಸಹೋದರನಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಕುಟುಂಬಸ್ಥರನ್ನು ಹೋಂ ಐಸೊಲೇಷನ್ ಮಾಡಲಾಗಿತ್ತು.
ಬಳಿಕ, ಪತಿಯ ಸಹೋದರನ ಪತ್ನಿಗೆ ಹಾಗೂ ಮೃತ ಶಿಕ್ಷಕಿಯಲ್ಲಿಯೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಮೃತ ಶಿಕ್ಷಕಿಗೆ ಐದು ವರ್ಷದ ಮಗುವಿದ್ದು, ಆ ಮಗುವಿಗೂ ಕೂಡ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಮಗುವಿನ ವರದಿ ನೆಗೆಟಿವ್ ಎಂದು ಬಂದಿತ್ತು. ಆದರೆ, ಮೃತ ಶಿಕ್ಷಕಿಯ ಬಳಿ ಆ ಮಗುವನ್ನು ಕಳುಹಿಸಲಾರದ್ದಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸಂಡೂರು ತಹಶೀಲ್ದಾರ್ ರಶ್ಮಿಕಾ ಮಾಹಿತಿ ನೀಡಿದ್ದಾರೆ.