ಕರ್ನಾಟಕ

karnataka

ETV Bharat / state

ಫೆ. 24 ರ ಒಳಗೆ ರೈತರಿಗೆ ಬೆಳೆಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು : ಬ್ಯಾಂಕ್ ಶಾಖಾ ವ್ಯವಸ್ಥಾಪಕರಿಗೆ ಸೂಚನೆ - ಗ್ರಾಮೀಣ ಬ್ಯಾಂಕ್‍

ಬಳ್ಳಾರಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 1,94,024 ರೈತರು ಅರ್ಹರಿದ್ದಾರೆ. ಇವರಿಗೆ ಸಾಲ ನೀಡಲಾಗುವುದು ಎಂದು ಬಳ್ಳಾರಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ನಬಾರ್ಡ್ ಸಹಾಯಕ ವ್ಯವಸ್ಥಾಪಕ ಪ್ರಬಂಧಕರು ತಿಳಿಸಿದ್ದಾರೆ.

prime-minister-kisan-samman-plan
prime-minister-kisan-samman-plan

By

Published : Feb 11, 2020, 2:13 AM IST

ಬಳ್ಳಾರಿ: ಕೇಂದ್ರ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿರುವ ಎಲ್ಲ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಫೆ.24ರೊಳಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಬೆಳೆಸಾಲ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಬಳ್ಳಾರಿ ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ನಬಾರ್ಡ್ ಸಹಾಯಕ ವ್ಯವಸ್ಥಾಪಕ ಪ್ರಬಂಧಕರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಬಳ್ಳಾರಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ 1,94,024 ರೈತರು ಅರ್ಹರಿದ್ದಾರೆ. ಅದರಲ್ಲಿ ಇದುವರೆಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು, ಗ್ರಾಮೀಣ ಬ್ಯಾಂಕ್‍ಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗಳಿಂದ 1,65,566 ರೈತರು ಬೆಳೆ ಸಾಲ ಪಡೆದಿದ್ದಾರೆ. ಇನ್ನುಳಿದ 28,458 ರೈತರು ಈ ಆದ್ಯತೆ ಮೇರೆಗೆ ಬೆಳೆಸಾಲ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್​ ನಿಧಿ ಕೇಂದ್ರಸರ್ಕಾರದ ಯೋಜನೆಯಾಗಿದ್ದು, 2018 ಡಿ.1ರಿಂದ ಪ್ರಾರಂಭವಾಗಿದೆ.

ABOUT THE AUTHOR

...view details