ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಹೆಚ್ಚುವರಿ ಎಸ್ಪಿ ಲಾವಣ್ಯ ನೇತೃತ್ವದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹರಟೆ ಹೊಡೆಯುವ ಯುವಕರಿಗೆ ಬಸ್ಕಿ ಹೊಡೆಸಿದ್ದಾರೆ.
ಹರಟೆ ಹೊಡೆಯುವ ಯುವಕರಿಗೆ ಬಸ್ಕಿ ಹೊಡೆಸಿ ಲಾಠಿ ರುಚಿ ತೊರಿಸಿದ ಪೊಲೀಸರು
ದೇವಸ್ಥಾನ ಪ್ರದೇಶಗಳಲ್ಲಿ ಹರಟೆ ಹೊಡೆಯುವ ಯುವಕರಿಗೆ ಪೊಲೀಸರು ಲಾಠಿ ಏಟು ಕೊಟ್ಟು, ರಸ್ತೆಯಲ್ಲಿ ಬಸ್ಕಿ ಹೊಡೆಸಿ ಮನೆಗಳಿಗೆ ಕಳಿಸಿದರು.
ಕೌಲ ಬಜಾರ್, ಗಾಂಧಿ ನಗರ, ಮಹಿಳಾ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಟೀಮ್ ದುರ್ಗ ಪಡೆಯ ಸಹಯೋಗದಲ್ಲಿ ನಗರದ ದೇವಿನಗರ ಮತ್ತು ಎಸ್.ಪಿ ಸರ್ಕಲ್, ಕುರುಬರ ಹಾಸ್ಟೆಲ್, ಕುಮಾರಸ್ವಾಮಿ ದೇವಸ್ಥಾನ ಪ್ರದೇಶಗಳಲ್ಲಿ ಹರಟೆ ಹೊಡೆಯುವ ಯುವಕರಿಗೆ ಲಾಠಿ ಏಟು ಕೊಟ್ಟು, ರಸ್ತೆಯಲ್ಲಿ ಬಸ್ಕಿ ಹೊಡೆಸಿ ಮನೆಗಳಿಗೆ ಕಳಿಸಿದರು.
ಕೌಲ ಬಜಾರ್ ಠಾಣೆಯ ಸಿಪಿಐ ಸುಭಾಷ್ ಚಂದ್ರ, ಗಾಂಧಿ ನಗರ ಠಾಣೆಯ ಸಿಪಿಐ ಗಾಯತ್ರಿ, ಸಿಪಿಐ ಹಾಲೇಶ್, ಪಿ.ಎಸ್.ಐ ಗಳಾದ ಮಂಜುನಾಥ ದಳವಾಳಿ, ಮಣಿಕಂಠ ಸಂಗನಕಲ್ಲು ಮತ್ತು ಕೌಲ ಬಜಾರ್, ಗಾಂಧಿನಗರ, ಮಹಿಳಾ ಠಾಣೆಯ ಪೊಲೀಸ್ ಸಿಬ್ಬಂದಿ ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.