ಹೊಸಪೇಟೆ:ಸ್ಥಳೀಯ ಪಟ್ಟಣ ಠಾಣೆ ಪೊಲೀಸರು ಬುಧವಾರ ಅನಾಮಧೇಯ ವ್ಯಕ್ತಿಯ ಶವದ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಹೊಸಪೇಟೆ ಪೊಲೀಸರಿಂದ ಅನಾಮಧೇಯ ವ್ಯಕ್ತಿಯ ಮೃತದೇಹಕ್ಕೆ ಅಂತ್ಯಕ್ರಿಯೆ - hospet latest update news
ಮೃತಪಟ್ಟ ವ್ಯಕ್ತಿಯ ಕಡೆಯವರು ಯಾರೂ ಬಾರದ ಇದ್ದುದರಿಂದ ಹೊಸಪೇಟೆಯ ಸ್ಥಳೀಯ ಪಟ್ಟಣ ಠಾಣೆ ಪೊಲೀಸರು ಬುಧವಾರ ಶವದ ಅಂತ್ಯಕ್ರಿಯೆ ನಡೆಸಿದರು.
ಅನಾಮಧೇಯ ಶವದ ಅಂತ್ಯಕ್ರಿಯೆ ನೆರವೇರಿಸಿದ ಹೊಸಪೇಟೆ ಪೊಲೀಸರು
ಸರಸ್ವತಿ ಚಿತ್ರ ಮಂದಿರ ಸಮೀಪದ ಬಳ್ಳಾರಿ ಬಿರಿಯಾನಿ ಹೋಟೆಲ್ ಪಕ್ಕದ ಕಟ್ಟೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಅಸ್ವಸ್ಥನಾಗಿ ಬಿದ್ದಿದ್ದ ಅಂದಾಜು 55 ವಯಸ್ಸಿನ ವ್ಯಕ್ತಿಯನ್ನು ಪೊಲೀಸರು ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಆತ ಚಿಕಿತ್ಸೆ ಫಲಿಸದೆ ಬುಧವಾರ ಮೃತಪಟ್ಟಿದ್ದ.
ವ್ಯಕ್ತಿಯ ಸಂಬಂಧಿಕರು ಯಾರೂ ಬಾರದ ಕಾರಣ ಪಟ್ಟಣ ಠಾಣೆಯ ಹೆಡ್ ಕಾನ್‌ಸ್ಟೇಬಲ್, ಕಾನ್‌ಸ್ಟೇಬಲ್ ಗಾದಿಲಿಂಗಪ್ಪ ಅವರು ನಗರಸಭೆ ಸಿಬ್ಬಂದಿ ಸಹಾಯದಿಂದ ಸಂಡೂರು ರಸ್ತೆಯ ರೂದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.