ಕರ್ನಾಟಕ

karnataka

ETV Bharat / state

ಗಣಿನಾಡಿನಲ್ಲಿ ಪಾರಿವಾಳ ಜೂಜು... ಬಾಜಿ ಕಟ್ಟುವವರಿಗಿಲ್ಲ ಪೊಲೀಸರ ಭಯ - ದಿನಗೂಲಿ ನೌಕರರು

ಗಣಿನಾಡಿನಲ್ಲಿ ಪಾರಿವಾಲ ಜೂಜು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ಜೂಜಾಟ ನಿರ್ಭಯವಾಗಿ ಸಾಗುತ್ತಿರುವುದು ಕುತೂಹಲ ಮೂಡಿಸಿದೆ.

ಗಣಿನಾಡಿನಲ್ಲಿ ಪಾರಿವಾಳ ಜೂಜು

By

Published : Mar 17, 2019, 5:32 PM IST

Updated : Mar 17, 2019, 5:47 PM IST

ಬಳ್ಳಾರಿ:ಪಾರಿವಾಳ ಹಾರಿಸುವ ಸ್ಪರ್ಧೆ ಹಲವೆಡೆ ನಡೆಯುತ್ತದೆ. ಇದರಲ್ಲಿ ಜೂಜು ನಡೆಯಕೂಡದು ಎಂಬ ಪೊಲೀಸರ ಕಟ್ಟಾಜ್ಞೆ ಇದ್ದರೂ ಗಣಿನಾಡು ಬಳ್ಳಾರಿಯಲ್ಲಿ


ಇಂದು ಆರಕ್ಷಕರ ಭಯವಿಲ್ಲದೆ ಜನರು ನಿರ್ಭೀತಿಯಿಂದ ಪಾರಿವಾಳ ಜೂಜಿನಲ್ಲಿ ತೊಡಗಿದರು.

ಇಂದು ಬೆಳಗ್ಗೆ ನಗರದ ರೇಡಿಯೋ ಪಾರ್ಕ್ ಒಂದನೇ ರೈಲ್ವೆ ಗೇಟ್ ಹತ್ತಿರ ಈ ಪಾರಿವಾಳ ಜೂಜು ನಡೆಯಿತು.

ಗಣಿನಾಡಿನಲ್ಲಿ ಪಾರಿವಾಳ ಜೂಜು

ನಗರದ ಎರಡು ಪ್ರದೇಶಗಳಾದ ಬಂಡಿಹಟ್ಟಿಯ ಪಾರಿವಾಳ ಖಾನಿ ಮತ್ತು ಕುರುಬರ ಹಾಸ್ಟೆಲ್ ‌ನಲ್ಲಿ ಹತ್ತಿರದ ಪಾರಿವಾಳ ಖಾನಿಗಳ ನಡುವೆ ಜೂಜಾಟ ನಡೆಯಿತು. ಪಾರಿವಾಳ ಪೆಟ್ಟಿಗೆಗೆ ಬಿದ್ದ ತಕ್ಷಣ ಅದನ್ನು ಮುಟ್ಟಿ ಯುವಕರು ಓಡುತ್ತಾರೆ. ಯಾರು ಅತಿಹೆಚ್ಚು ಓಡಿ ಗುರಿಮುಟ್ಟತ್ತಾರೆ ಅವರು ಜಯಶೀಲರಾದ ಹಾಗೆ.

ಪಾರಿವಾಳ ಜೂಜು ಸ್ಪರ್ಧೆಯಲ್ಲಿ 50 ಕ್ಕೆ 100 ರೂ ರಂತೆ, 10,000 ಸಾವಿರಕ್ಕೆ, 20,000 ಸಾವಿರ ರೂಪಾಯಿ ನೀಡಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ದುಡ್ಡಿನ ಸುರಿಮಳೆ ನಾಗಲೋಟವಾಗಿ ಹರಿದಾಡುತ್ತಿದೆಯಂತೆ. ಈ ಜೂಜು 5 ನಿಮಿಷದಲ್ಲಿ ಮುಗಿಯುತ್ತೆ, ಭಾನುವಾರ, ಹಬ್ಬ ಹರಿದಿನಗಳಲ್ಲಿ , ರಜೆ ದಿನಗಳಲ್ಲಿ ದಿನಗೂಲಿ ನೌಕರರು, ಆಟೊ ಚಾಲಕರು, ಅತಿಹೆಚ್ಚು ಯುವಕರು ಈ ಪಾರಿವಾಳ ಜೂಜು ಸ್ಪರ್ಧೆಯನ್ನು ಆಡಿ, ಹಣವನ್ನು ಕಳೆದುಕೊಂಡು ಮನೆಗಳಿಗೆ ಸೇರುತ್ತಾರೆ. ದಿನಕ್ಕೆ 4 ರಿಂದ 5 ಆಟಗಳನ್ನು ಆಡುತ್ತಾರೆ ಎನ್ನುವ ಮಾಹಿತಿಯನ್ನು ಇಲ್ಲಿನ ಯುವಕರು ನೀಡಿದ್ದಾರೆ. ಸ್ಥಳಕ್ಕೆ ಯಾವುದೇ ಪೊಲಿಸ್ ಸಿಬ್ಬಂದಿ ಬಾರದೆ ಇರುವುದು ಕುತೂಹಲ ಮೂಡಿಸಿದೆ.

Last Updated : Mar 17, 2019, 5:47 PM IST

ABOUT THE AUTHOR

...view details