ಬಳ್ಳಾರಿ: ಲಾರಿ ಚಕ್ರಕ್ಕೆ ಸಿಲುಕಿ ವೃದ್ಧೆಯೊಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ತೋರಣಗಲ್ ನಿವಾಸಿ ಗಂಗಮ್ಮ ಮೃತರೆಂದು ತಿಳಿದುಬಂದಿದೆ.
ಬಳ್ಳಾರಿ: ಲಾರಿ ಹರಿದು ವೃದ್ಧೆ ಸ್ಥಳದಲ್ಲೇ ಸಾವು, ಚಾಲಕ ಪೊಲೀಸ್ ವಶಕ್ಕೆ - old woman died by accident
ಜಿಂದಾಲ್ ಕಾರ್ಖಾನೆಯ ಓಲ್ಡ್ ಗೇಟ್ ಬಳಿ ಘಟನೆ ಸಂಭವಿಸಿತು.
ಬಳ್ಳಾರಿಯಲ್ಲಿ ಲಾರಿ ಅಪಘಾತ
ಕಾರ್ಖಾನೆಯ ಎದುರು ನಡೆದು ಹೋಗುತ್ತಿದ್ದ ವೃದ್ಧೆಯ ಮೇಲೆ ಲಾರಿ ಹರಿದಿದೆ. ಚಕ್ರದಡಿ ಸಿಲುಕಿದ ಮಹಿಳೆಯ ದೇಹ ಛಿದ್ರವಾಗಿದೆ. ಭೀಕರ ದೃಶ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತೋರಣಗಲ್ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಆರೋಪ : ಪೊಲೀಸ್ ಕಾನ್ಸ್ಟೇಬಲ್ ಬಂಧನ