ಬಳ್ಳಾರಿ: ಗಣಿನಾಡಿನ ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆಯಾಗದೇ ನಿಂತಿದೆ, ನಿತ್ಯದ ಪ್ರಯಾಣಿಕರಲ್ಲಿ ವಾಹನಗಳಿಗೆ ಹಣ / ಶುಲ್ಕ ನೀಡದೇ ಇರುವುದು ಸಂತೋಷ ತಂದಿದೆ.
15 ದಿನಗಳಿಂದ ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆ ಇಲ್ಲ ನಗರದ ರೈಲ್ವೆ ನಿಲ್ದಾಣದ ವಾಹನಗಳ ಟೆಂಡರ್ ಪ್ರಕ್ರಿಯೆಯಾಗಿಲ್ಲ. ನಿತ್ಯ ಜಿಲ್ಲೆಯಿಂದ ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ ಮತ್ತು ಇನ್ನಿತರ ಪ್ರದೇಶಗಳಿಗೆ ರೈಲ್ವೆಯಲ್ಲಿ ನಿತ್ಯ ಪಯಣ ಮಾಡುವ ಪ್ರಯಾಣಿಕರು ಸಾವಿರಾರು ಜನರು ಇದ್ದಾರೆ. ನೂರಾರು ದ್ವಿಚಕ್ರ ವಾಹನಗಳನ್ನು ಮತ್ತು ದಿನವೂ ಆಟೋ,ಕಾರು, ವ್ಯಾನ್, ಜೀಪ್ ಇನ್ನಿತರ ವಾಹನಗಳನ್ನು ರೈಲ್ವೆ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ನಲ್ಲಿ ನಿಲ್ಲಿಸುತ್ತಾರೆ.
ಆದರೆ, ವಾಹನ ಸವಾರರಿಗೆ ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆ ಆಗಿಲ್ಲದ ಕಾರಣ ವಾಹನಗಳಿಗೆ ಹಣ ನೀಡದೇ ಆರಾಮವಾಗಿ ತಮ್ಮ ಗಾಡಿಗಳನ್ನು ಬೆಳಗ್ಗೆಯಿಂದ ಸಂಜೆ, ರಾತ್ರಿವರೆಗೂ ಪ್ರಯಾಣಿಕರು ವಾಹನಗಳನ್ನು ಪಾರ್ಕಿಂಗ್ನಲ್ಲಿ ನಿಲ್ಲಿಸಿ, ಯಾವುದೇ ದುಡ್ಡು ನೀಡದ ಪರಿಸ್ಥಿತಿ ಕಳೆದ 15 ದಿನಗಳಿಂದ ಉಂಟಾಗಿದೆ ಎಂದು ಪಾರ್ಕಿಂಗ್ನಲ್ಲಿ ವಾಹನ ನಿಲ್ಲಿಸಿದ ಪ್ರಯಾಣಿಕರು ತಿಳಿಸಿದರು. ಇದರಿಂದಾಗಿ ರೈಲ್ವೆ ಇಲಾಖೆ ನಷ್ಟವನ್ನು ಉಂಟುಮಾಡುತ್ತಿದೆ.
ಹುಬ್ಬಳ್ಳಿ ವಿಭಾಗದ ರೈಲ್ವೆಯಲ್ಲಿ ಟೆಂಡರ್ ಪ್ರಕ್ರಿಯೆ ಆಗಿಲ್ಲದ ಕಾರಣ ನಿತ್ಯ ಸಾವಿರಾರೂ ರೂಪಾಯಿ ರೈಲ್ವೆ ಇಲಾಖೆಗೆ ನಷ್ಟವಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಪಾರ್ಕಿಂಗ್ ಟೆಂಡರ್ ಪ್ರಕ್ರಿಯೆಯನ್ನು ಜಾರಿ ಮಾಡಿ, ವಾಹನ ಸವಾರರಿಂದ ಹಣ ಪಡೆಯಬೇಕಾಗಿದೆ.